ಎಸ್‌ಬಿಐ: ರೂ 3,263 ಕೋಟಿ ಲಾಭ

7

ಎಸ್‌ಬಿಐ: ರೂ 3,263 ಕೋಟಿ ಲಾಭ

Published:
Updated:

ಮುಂಬೈ (ಪಿಟಿಐ):  ಡಿಸೆಂಬರ್ 31ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೂರನೇಯ ತ್ರೈಮಾಸಿಕ ಅವಧಿಯಲ್ಲಿ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ರೂ3,263 ಕೋಟಿಗಳಷ್ಟು ನಿವ್ವಳ ಲಾಭ ದಾಖಲಿಸಿದೆ.



ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬ್ಯಾಂಕಿನ ನಿವ್ವಳ ಲಾಭ ಶೇ 15ರಷ್ಟು ಏರಿಕೆ ಕಂಡಿದೆ.  ಒಟ್ಟು ವರಮಾನ ರೂ43,155 ಕೋಟಿಗಳಷ್ಟಾಗಿದ್ದು, ಶೇ 16.7ರಷ್ಟು ಏರಿಕೆ ಪಡೆದಿದೆ. ಮೂರನೇಯ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕಿನ ಒಟ್ಟಾರೆ ನಿವ್ವಳ ಲಾಭವು ಶೇ 16ರಷ್ಟು ಏರಿಕೆ ಕಂಡಿದ್ದು,  ರೂ4,318 ಕೋಟಿಗಳಷ್ಟಾಗಿದೆ. ಈ ಅವಧಿಯಲ್ಲಿ ಒಟ್ಟಾರೆ ನಿವ್ವಳ ವರಮಾನ ಶೇ 20ರಷ್ಟು ಹೆಚ್ಚಿದ್ದು, ರೂ29,787 ಕೋಟಿಗಷ್ಟಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry