ಎಸ್‌ಬಿಐ ಲಾಭ ರೂ 11707 ಕೋಟಿ

7

ಎಸ್‌ಬಿಐ ಲಾಭ ರೂ 11707 ಕೋಟಿ

Published:
Updated:

ನವದೆಹಲಿ(ಪಿಟಿಐ): ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ `ಭಾರತೀಯ ಸ್ಟೇಟ್ ಬ್ಯಾಂಕ್~(ಎಸ್‌ಬಿಐ) ಮಾರ್ಚ್ 31ಕ್ಕೆ ಕೊನೆಗೊಂಡ 2011-12ನೇ ಹಣಕಾಸು ವರ್ಷದಲ್ಲಿ ರೂ 11,707.29 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಲಾಭ ್ಙ8264.52 ಕೋಟಿಗೆ ಹೋಲಿಸಿದಲ್ಲಿ ಶೇ 41.6ರಷ್ಟು ಪ್ರಗತಿ ದಾಖಲಿಸಿದೆ.ಹಣಕಾಸು ವರ್ಷದಲ್ಲಿನ ಬ್ಯಾಂಕ್‌ನ ಒಟ್ಟಾರೆ ವರಮಾನ ರೂ 1.21 ಲಕ್ಷ ಕೋಟಿಗೆ ಏರಿದೆ.

4ನೇ ತ್ರೈಮಾಸಿಕದಲ್ಲಿಯೂ ಎಸ್‌ಬಿಐ ನಿವ್ವಳ ಲಾಭ ರೂ 4050.27 ಕೋಟಿ ಇದೆ. ಹಿಂದಿನ ವರ್ಷದ 4ನೇ ತ್ರೈಮಾಸಿಕದಲ್ಲಿ ಬ್ಯಾಂಕ್ ನಿವ್ವಳ ಲಾಭ ಕೇವಲ ರೂ 20.88 ಕೋಟಿ ಇದ್ದಿತು. ವಸೂಲಾಗದ ಸಾಲ ಭಾರಿ ಪ್ರಮಾಣದಲ್ಲಿದ್ದುದು ಮತ್ತು ತೆರಿಗೆ ಮೊತ್ತವೂ ದೊಡ್ಡದಿದ್ದುದು ಕಳೆದ ವರ್ಷದ ಕಡೆಯ 3 ತಿಂಗಳ ಲಾಭ ಕುಸಿತಕ್ಕೆ ಕಾರಣವಾಗಿತ್ತು.ಉತ್ತಮ ಫಲಿತಾಂಶದ ಕಾರಣ ಎಸ್‌ಬಿಐ ಷೇರಿನ ಬೆಲೆ ಶೇ 3.6ರಷ್ಟು ಏರಿಕೆ ಕಂಡು ಶುಕ್ರವಾರ ್ಙ1913ರಲ್ಲಿ ವಹಿವಾಟು ನಡೆಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry