ಸೋಮವಾರ, ಮೇ 17, 2021
31 °C

ಎಸ್‌ಬಿಐ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಸ್‌ಬಿಐ ತಂಡ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ ಎಸ್. ರಂಗರಾಜನ್ ಸ್ಮಾರಕ ಟ್ರೋಫಿ ರಾಜ್ಯ `ಸಿ' ಡಿವಿಷನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ 50-22ರಲ್ಲಿ ಬಿ.ಸಿ. ಬ್ಯಾಸ್ಕೆಟ್‌ಬಾಲ್ ಕ್ಲಬ್ ಎದುರು ಶುಭಾರಂಭ ಮಾಡಿತು.ಕಂಠೀರವ ಹೊರಾಂಗಣ ಕ್ರೀಡಾಂಗಣದ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಎಸ್‌ಬಿಐ ಮೊದಲಾರ್ಧ ಕೊನೆಗೊಂಡಾಗ 23-9ರಲ್ಲಿ ಮುನ್ನಡೆ ಸಾಧಿಸಿತ್ತು. ಈ ತಂಡದ ಜಗದೀಶ್ 20 ಪಾಯಿಂಟ್‌ಗಳನ್ನು ಕಲೆ ಹಾಕಿ ಗಮನ ಸೆಳೆದರು. ಇನ್ನೊಂದು ಪಂದ್ಯದಲ್ಲಿ ಮೈಸೂರಿನ ಪ್ರೊಟೆಕ್ ಸಂಸ್ಥೆ 35-14ರಲ್ಲಿ ಅಪ್ಪಯ್ಯ ಕ್ಲಬ್ ಮೇಲೂ, ರಾಜಮಹಲ್ ಕ್ಲಬ್ 43-40ರಲ್ಲಿ ಮೈಸೂರಿನ ರೇಂಜರ್ಸ್ ವಿರುದ್ಧವೂ ಗೆಲುವು ಸಾಧಿಸಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.