ಸೋಮವಾರ, ಜೂನ್ 21, 2021
29 °C

ಎಸ್‌ಬಿಐ ಸಾಲ: ಬಡ್ಡಿ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಶಿಕ್ಷಣ ಸಾಲದ ಬಡ್ಡಿ ದರವನ್ನು ಗರಿಷ್ಠ ಶೇ 1ರಷ್ಟು ಕಡಿಮೆ ಮಾಡಿದೆ.ಹೊಸ ಬಡ್ಡಿ ದರಗಳು ಫೆ. 27ರಿಂದಲೇ ಜಾರಿಗೆ ಬಂದಿದ್ದು, ಇತರ ಬ್ಯಾಂಕ್‌ಗಳೂ ಇದೇ ನೀತಿ ಅನುಸರಿಸುವ ಸಾಧ್ಯತೆಗಳಿವೆ. 
ಸ್ವದೇಶ ಮತ್ತು ವಿದೇಶದಲ್ಲಿ ಉನ್ನತ ವ್ಯಾಸಂಗ ನಡೆಸಲು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ಕಡಿಮೆ ಬಡ್ಡಿ ದರಕ್ಕೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ರೂ 4 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿ ದರವು ಶೇ 0.25ರಷ್ಟು ಕಡಿಮೆಯಾಗಿ ಸದ್ಯದ ಶೇ 13.75ರಿಂದ ಶೇ 13.50ಕ್ಕೆ ಇಳಿಯಲಿದೆ.ರೂ 4 ರಿಂದ ರೂ7.5 ಲಕ್ಷವರೆಗಿನ ಸಾಲವು ಹಿಂದಿನ ಶೇ 14.25ರ ಬದಲಿಗೆ ಶೇ 13.25ಕ್ಕೆ ದೊರೆಯಲಿದೆ. ಈ ವಿಭಾಗದಲ್ಲಿನ ಬಡ್ಡಿ ದರ ಗರಿಷ್ಠ ಶೇ 1ರಷ್ಟು ಕಡಿಮೆಯಾಗಲಿದೆ. ರೂ 7.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ  ಶೇ 0.25ರಷ್ಟು ಕಡಿಮೆಯಾಗಿ ಶೇ 12ಕ್ಕೆ  ದೊರೆಯಲಿದೆ.ಶಿಕ್ಷಣ ಸಾಲದ ಯೋಜನೆ ಅಂಗವಾಗಿ ಸ್ವದೇಶದಲ್ಲಿ ಗರಿಷ್ಠ ರೂ10 ಲಕ್ಷದವರೆಗೆ ಮತ್ತು ವಿದೇಶದಲ್ಲಿನ ಉನ್ನತ ವಿದ್ಯಾಭ್ಯಾಸಕ್ಕೆ ರೂ 20 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ.ಸಾಲ ಸೌಲಭ್ಯ ವಿಸ್ತರಣೆ: `ಎಸ್‌ಬಿಐ ವಿದ್ಯಾರ್ಥಿ ಸಾಲ ಯೋಜನೆ~ಯನ್ನು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಾದ ಐಐಎಂ / ಐಐಟಿ / ಎನ್‌ಐಟಿ ಮತ್ತಿತರ ಕಡೆ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.ಈ ವಿದ್ಯಾರ್ಥಿಗಳಿಗೆ ಬ್ಯಾಂಕ್‌ನ `ಮೂಲ ದರ~ (ಶೇ 10) ಕ್ಕಿಂತ ಶೇ 2ರಷ್ಟು ಹೆಚ್ಚಿನ ಬಡ್ಡಿ ದರಕ್ಕೆ (ಶೇ 12) ಸಾಲ ನೀಡಲಾಗುವುದು. ಸದ್ಯಕ್ಕೆ ಈ ಸೌಲಭ್ಯ ವ್ಯಾಪ್ತಿಗೆ 111 ಶಿಕ್ಷಣ ಸಂಸ್ಥೆಗಳು ಒಳಪಟ್ಟಿದ್ದು, ವಿದ್ಯಾರ್ಥಿಗಳಿಗೆ ್ಙ15 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ.ಈ ಶೈಕ್ಷಣಿಕ ಸಾಲವನ್ನು ಸುಲಭ ಷರತ್ತುಗಳಿಗೆ ಅನುಗುಣವಾಗಿ ಮಂಜೂರು ಮಾಡಲಾಗುತ್ತಿದೆ. ಪಾಲಕರು/ ಪೋಷಕರನ್ನು ಸಹ ಸಾಲಗಾರರನ್ನಾಗಿ ಮಾಡಲಾಗುವುದಷ್ಟೆ. ಯಾವುದೇ ಭದ್ರತೆ ಪಡೆಯುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಸಾಲದಲ್ಲಿ ಶೇ 0.50ರಷ್ಟು ಹೆಚ್ಚುವರಿ ರಿಯಾಯ್ತಿಯನ್ನೂ ನೀಡಲಾಗುವುದು. ಶಿಕ್ಷಣ ಕಲಿಯುವ ಅವಧಿ ಸೇರಿದಂತೆ, ಸಾಲ ಮರು ಪಾವತಿ ನಿರ್ಬಂಧಿಸಿದ ಅವಧಿಯಲ್ಲಿ ಬಡ್ಡಿ ಪಾವತಿಸಿದರೆ, ಸಾಲ ಪಾವತಿ ಅವಧಿ ಉದ್ದಕ್ಕೂ ಶೇ 1ರಷ್ಟು ಬಡ್ಡಿ ವಿನಾಯ್ತಿಯನ್ನೂ ನೀಡಲಾಗುವುದು ಎಂದೂ ಬ್ಯಾಂಕ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.