ಎಸ್‌ಬಿಟಿ: 1ಲಕ್ಷ ಕೋಟಿ ದಾಟಿದ ವಹಿವಾಟು

7

ಎಸ್‌ಬಿಟಿ: 1ಲಕ್ಷ ಕೋಟಿ ದಾಟಿದ ವಹಿವಾಟು

Published:
Updated:

ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್‌ನ ಸಹವರ್ತಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ (ಎಸ್‌ಬಿಟಿ), ಡಿಸೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ್ಙ 1 ಲಕ್ಷ ಕೋಟಿಗಳಿಗಿಂತ ಹೆಚ್ಚಿನ ವಹಿವಾಟು ನಡೆಸಿದೆ.ಬ್ಯಾಂಕ್‌ನ ಇತಿಹಾಸದಲ್ಲಿ ಇದೊಂದು ಹೊಸ ಮೈಲಿಗಲ್ಲು ಆಗಿದ್ದು,  ನಿವ್ವಳ ಲಾಭವು ಕಳೆದ ವರ್ಷದ ಇದೇ ಅವಧಿಯಲ್ಲಿನ ್ಙ 165 ಕೋಟಿಗಳಿಗೆ ಹೋಲಿಸಿದರೆ ಶೇ 6.70ರಷ್ಟು ಹೆಚ್ಚಳವಾಗಿ  ್ಙ 176 ಕೋಟಿಗಳಷ್ಟಾಗಿದೆ. ಒಂಬತ್ತು ತಿಂಗಳ ನಿವ್ವಳ ಲಾಭವು ್ಙ489 ಕೋಟಿಗಳಷ್ಟು ಆಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ಪ್ರದೀಪ್ ಕುಮಾರ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಬ್ಯಾಂಕ್‌ನ ಒಟ್ಟು ವಹಿವಾಟು ವರ್ಷದಿಂದ ವರ್ಷಕ್ಕೆ ್ಙ 16,156 ಕೋಟಿಗಳಷ್ಟು ಹೆಚ್ಚಾಗಿ ್ಙ 1,00,454 ಕೋಟಿಗಳಷ್ಟಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ 35 ಹೊಸ ಶಾಖೆಗಳನ್ನು ಆರಂಭಿಸಲಾಗಿದ್ದು, ಒಟ್ಟು ಶಾಖೆಗಳ ಸಂಖ್ಯೆ ಈಗ 783ಕ್ಕೆ ತಲುಪಿದೆ. ವರ್ಷಾಂತ್ಯಕ್ಕೆ ಶಾಖೆಗಳ ಸಂಖ್ಯೆ 800ರ ಗಡಿ ದಾಟಲಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry