ಎಸ್‌ಸಿ,ಎಸ್ಟಿ ಸುಳ್ಳು ಪ್ರಮಾಣಪತ್ರ ಪ್ರಕರಣ ಹೆಚ್ಚಳ: ನರೇಂದ್ರಸ್ವಾಮಿ

7

ಎಸ್‌ಸಿ,ಎಸ್ಟಿ ಸುಳ್ಳು ಪ್ರಮಾಣಪತ್ರ ಪ್ರಕರಣ ಹೆಚ್ಚಳ: ನರೇಂದ್ರಸ್ವಾಮಿ

Published:
Updated:

ದಾವಣಗೆರೆ: ಪರಿಶಿಷ್ಟರೆಂದು ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸರ್ಕಾರದ ಸೌಲಭ್ಯವನ್ನು ಅನರ್ಹರು ಪಡೆದು­ಕೊ­ಳ್ಳು­­­ತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ವಿಧಾನಮಂಡಲ ಅನುಸೂಚಿತ ಜಾತಿ ಹಾಗೂ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರ­ಸ್ವಾಮಿ ತಿಳಿಸಿದರು.ಮಂಗಳವಾರ ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಕರ್ತ­ರೊಂದಿಗೆ ಅವರು ಮಾತನಾಡಿದರು.ಸ್ವಾತಂತ್ರ್ಯ ಬಂದು ಇಷ್ಟು ವರ್ಷ-­ಗಳಾದರೂ ಸಾಮಾಜಿಕ ಪಿಡುಗುಗಳು ಹಾಗೆಯೇ ಉಳಿದಿವೆ. ಅಘೋಷಿತ, ಇಚ್ಛಾಶಕ್ತಿ ಇಲ್ಲದ ಆಡಳಿತ ವ್ಯವಸ್ಥೆಯಲ್ಲಿ ಈ ಲೋಪ ಕಾಣಿಸುತ್ತಿದೆ. ಸಭೆ-­ಯಲ್ಲಿಯೂ ಈ ಅಂಶವನ್ನು ಸಮಿತಿ ಗುರುತಿಸಿದೆ ಎಂದು ಹೇಳಿದರು.ಸರ್ಕಾರದ ಯೋಜನೆಗಳು ಪರಿಶಿಷ್ಟ­ರನ್ನು ಹೇಗೆ ತಲುಪುತ್ತಿವೆ. ತಲುಪದಿಲ್ಲ­ದಿರುವುದಕ್ಕೆ ಕಾರಣಗಳೇನು? ಮಾಡಿ­ಕೊಳ್ಳ­ಬೇಕಾದ ಬದಲಾವಣೆ­ಗಳೇನು ಎಂಬಿತ್ಯಾದಿ ಅಂಶಗಳನ್ನು ಸೇರಿಸಿ ವರದಿ ಸಿದ್ಧಪಡಿಸಿ, ಮಾರ್ಚ್‌ ವೇಳೆಗೆ ಸಲ್ಲಿಸ­ಲಾಗುವುದು ಎಂದರು.ಸೌಲಭ್ಯ ಪಡೆದು ಶಾಸಕನಾದ! ಸದಸ್ಯ ಗೋವಿಂದ ಕಾರಜೋಳ ಮಾತನಾಡಿ, ದಾವಣಗೆರೆ, ಕೋಲಾರ ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣ ಕಂಡುಬಂದಿವೆ. ಅನರ್ಹರು ಸರ್ಕಾರಿ ಸೇವೆ, ವೈದ್ಯಕೀಯ ಹಾಗೂ ಎಂಜಿನಿ­ಯರಿಂಗ್‌ ಸೀಟು ಪಡೆದುಕೊಂಡಿದ್ದಾರೆ. ಕೋಲಾರದಲ್ಲಿ ವ್ಯಕ್ತಿಯೊಬ್ಬರು ಶಾಸಕ­ರಾ­ಗಿಯೂ ಆಯ್ಕೆ ಆಗಿದ್ದಾರೆ. ದಾವಣ­ಗೆರೆಯಲ್ಲಿ ಒಬ್ಬರು ಜಿ.ಪಂ. ಸದಸ್ಯ­ರಾಗಿ­ದ್ದರು. ಇದಕ್ಕೆ ಕಡಿವಾಣ ಹಾಕುವಂತೆ ಕ್ರಮ ಕೈಗೊಳ್ಳ­ಬೇಕು ಎಂದು ವರದಿ ಸಲ್ಲಿಸ­­ಲಾಗುವುದು. ಆದರೆ, ಸೌಲಭ್ಯ ಪಡೆದ ಅನರ್ಹರು ಎನ್ನಲಾದವರ ಹೆಸರು ಬಹಿರಂಗಪಡಿಸಲು ಅವರು ಬಯಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry