ಎ ದರ್ಜೆ ಅರ್ಹತಾ ಅಥ್ಲೀಟ್‌ಗಳಿಗೆ ಮಾತ್ರ ಒಲಿಂಪಿಕ್ಸ್ ಪ್ರವೇಶ: ಎಎಫ್‌ಐ

7

ಎ ದರ್ಜೆ ಅರ್ಹತಾ ಅಥ್ಲೀಟ್‌ಗಳಿಗೆ ಮಾತ್ರ ಒಲಿಂಪಿಕ್ಸ್ ಪ್ರವೇಶ: ಎಎಫ್‌ಐ

Published:
Updated:

ನವದೆಹಲಿ (ಪಿಟಿಐ): `ಎ~ ದರ್ಜೆಯ ಅರ್ಹತೆ ಗಿಟ್ಟಿಸುವ ಅಥ್ಲೀಟ್‌ಗಳನ್ನು ಮಾತ್ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಕಳುಹಿಸಲು ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಮುಂದಾಗಿದೆ.ಎಎಫ್‌ಐನ ಎರಡು ದಿನಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ರಾಷ್ಟ್ರೀಯ ಕೋಚ್ ಬಹದ್ದೂರ್ ಸಿಂಗ್ ಎಎಫ್‌ಐಗೆ ವರದಿ ನೀಡಿದ್ದರು.`ಬಿ ದರ್ಜೆಯ ಅರ್ಹತೆ ಗಿಟ್ಟಿಸಿದವರನ್ನು ಇನ್ನುಮುಂದೆ ಒಲಿಂಪಿಕ್ಸ್‌ಗೆ ಕಳುಹಿಸುವುದಿಲ್ಲ. ಅಕಸ್ಮಾತ್ ಕೊಂಚದರಲ್ಲಿ ಎ ದರ್ಜೆಯ ಅರ್ಹತೆ ತಪ್ಪಿಸಿಕೊಂಡ ಅಥ್ಲೀಟ್‌ಗಳ ಬಗ್ಗೆ ಆಯ್ಕೆ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ~ ಎಂದು ಎಎಫ್‌ಐ ಅಧ್ಯಕ್ಷ ಅದಿಲ್ ಸುಮರಿವಾಲಾ ನುಡಿದಿದ್ದಾರೆ.`ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿ, ಅನುಭವ ಸಿಗಲಿ ಎಂಬ ಕಾರಣಕ್ಕೆ ನಾವು ಅಥ್ಲೀಟ್‌ಗಳನ್ನು ಕಳುಹಿಸುವುದಿಲ್ಲ. ಪ್ರಯೋಗ ಮಾಡಲೂ ಮುಂದಾಗುವುದಿಲ್ಲ~ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry