ಬುಧವಾರ, ಜೂನ್ 23, 2021
30 °C

ಎ.2ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ:ಫಲಿತಾಂಶ ಹೆಚ್ಚಳಕ್ಕೆ ನಾನಾ ಕಸರತ್ತು

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕಾರವಾರ: ಎಸ್‌ಎಸ್‌ಎಲ್‌ಸಿ ಎ. ಪರೀಕ್ಷೆ 2ರಿಂದ ಪ್ರಾರಂಭವಾಗಲಿದ್ದು 16ಕ್ಕೆ ಮುಕ್ತಾಯಗೊಳ್ಳಲಿದೆ. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿ ಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಹಿಂದಿನ ವೈಫಲ್ಯಗಳ ಕುರಿತು ಚಿಂತನೆ ನಡೆಸಿ ಅವು ಪುನರಾ ವರ್ತನೆ ಆಗದಂತೆ ನೋಡಿಕೊಳ್ಳಲು ಇಲಾಖೆ ವಿಶೇಷ ಒತ್ತು ನೀಡಿದೆ. ಕಳೆದ ಬಾರಿ ಶಿರಸಿ ನಾಲ್ಕನೇ ಮತ್ತು ಕಾರವಾರ ಐದನೇ ಸ್ಥಾನಕ್ಕೆ ಪಡೆದು ಕೊಂಡಿದ್ದವು.ಈ ಸ್ಥಾನಕ್ಕಿಂತ ಮೇಲೆರಲು ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿಗಳ ಕಲಿಕೆಯ ಕುರಿತು ನಿರಂತರ ಅಭ್ಯಾಸ ಮಾಡಿಸು ವುದು, ಮನೆಯಲ್ಲಿ ಓದಲು ವೇಳಾ ಪಟ್ಟಿ ಸಿದ್ಧಪಡಿಸುವುದು. ವೇಳಾಪಟ್ಟಿ ಪ್ರಕಾರ ಓದುತ್ತಿರುವ ಕುರಿತು ಶಿಕ್ಷಕರು ಖಾತ್ರಿಪಡಿಸಿಕೊಳ್ಳುವುದು. ಮಕ್ಕಳ ಅಭ್ಯಾಸದ ಬಗ್ಗೆ ಪಾಲಕರಿಗೆ ತಿಳಿವಳಿಕೆ ನೀಡುವ ಜವಾಬ್ದಾರಿಯನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರಿಗೆ ವಹಿಸಿ ಕೊಡಲಾಗಿದೆ.ಜಿಲ್ಲೆಯಲ್ಲಿ 2010-11ನೇ ಸಾಲಿ ನಲ್ಲಿ ಅಲ್ಪಸಂಖ್ಯಾತ ಶಾಲೆಗಳಲ್ಲಿ ದ್ವಿತೀಯ ಭಾಷೆ ಕನ್ನಡದಲ್ಲಿ ಫಲಿತಾಂಶ ಕಡಿಮೆ ಆಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವಿಶೇಷ ವಾಗಿ ಭಟ್ಕಳ ತಾಲ್ಲೂಕಿನಲ್ಲಿ ಫಲಿ ತಾಂಶ ಕಡಿಮೆ ಆಗಿರುವ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಈ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸುವ ಕುರಿತು ಇಲಾಖೆ ಕ್ರಮಕೈಗೊಂಡಿದೆ.

 

ಕಾರವಾರ ತಾಲ್ಲೂಕಿನ ಗಡಿ ಶಾಲೆಯಲ್ಲಿ ಕನ್ನಡ ಭಾಷೆಯಲ್ಲಿ ಅನುತ್ತೀರ್ಣತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕನ್ನಡ ಶಿಕ್ಷಕರ ಕಾರ್ಯಗಾರವನ್ನೂ ನಡೆಸ ಲಾಗುತ್ತಿದೆ.ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ- 1ರ ವಿದ್ಯಾರ್ಥಿಗಳ ಫಲಿತಾಂಶವನ್ನು ಹೆಚ್ಚಿಸಲು ಅವರಿಗಾಗಿ ಪ್ರತಿದಿನ ಬೆಳಿಗ್ಗೆ 9ರಿಂದ 9.45ಕ್ಕೆ ವಿಶೇಷ ತರಗತಿ ಗಳನ್ನು ನಡೆಸಲಾಗುತ್ತಿದೆ.

 

ಈ ವರ್ಗದ ವಿದ್ಯಾರ್ಥಿಗಳನ್ನು ಕ್ರಿಯಾಶೀಲ ಶಿಕ್ಷಕರಿಗೆ ದತ್ತು ನೀಡಿ ಅವರ ಕಲಿಕಾ ಪ್ರಗತಿ ಬಗ್ಗೆ ಯೋಜನೆ ರೂಪಿಸಲಾ ಗಿದೆ. ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ಆಲಿಸಲು ಮುಖ್ಯ ಶಿಕ್ಷಕರಿಗೆ ನಿಗಾ ವಹಿಸಲು ಸೂಚಿಸಲಾಗಿದೆ.2010-11ನೇ ಸಾಲಿನಲ್ಲಿ ಇಂಗ್ಲಿಷ್ ವಿಷಯದ ಪರೀಕ್ಷೆಯ ಫಲಿತಾಂಶ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಆಗಿರುವುದು ಕಂಡುಬಂದಿ ರುವ ಹಿನ್ನೆಲೆಯಲ್ಲಿ ಇಂಗ್ಲಿಷ್ ವಿಷ ಯದ ಫಲಿತಾಂಶ ಉತ್ತಮ ಪಡಿಸಲು ವ್ಯಾಕರಣ ತರಗತಿ, ಕ್ಯಾಸೆಟ್ ಮೂಲಕ ಪದ್ಯಗಳ ಕಲಿಕೆಯನ್ನು ಇಲಾಖೆ ಹಮ್ಮಿಕೊಂಡಿದೆ. ಇಂಗ್ಲಿಷ್ ಶಿಕ್ಷಕರ ಕಾರ್ಯಾಗಾರದಲ್ಲಿ ಸಂಭವನೀಯ ಪ್ರಶ್ನೆಪತ್ರಿಕೆ ತಯಾರಿಕೆ ಹಾಗೂ ಕ್ರಮ ವಾಗಿ ಪರೀಕ್ಷೆಗಳನ್ನು ನಡೆಸಲಾಗು ತ್ತಿದೆ.ಕನ್ನಡ ಸಂಘಗಳ ರಚನೆ, ಕನ್ನಡ ವಿಷಯ ಪರಿಣಿತರಿಂದ ತರಬೇತಿ, ಸಮಾಜ ವಿಜ್ಞಾನದ ವಿಶೇಷ ಕೋಶ ರಚನೆ ಹಾಗೂ ಪರಿಣಿತ ಶಿಕ್ಷಕರಿಂದ ತರಬೇತಿ, ಇತಿಹಾಸದಲ್ಲಿ ಬರುವ ಇಸ್ವಿ, ಭೂಗೋಳದಲ್ಲಿ ನಕಾಶೆ ಗುರು ತಿಸುವ, ಗಣಿತ ಸಂಘಗಳ ರಚನೆ, ಸೂತ್ರಗಳ ಪಟ್ಟಿ ತಯಾರಿಸಿ ಕಂಠಪಾಠ ಮಾಡಿಸುವುದು, ಮನೆಗಳಿಗೆ ಭೇಟಿ ನೀಡಿ ಪಾಲಕರೊಂದಿಗೆ ಸಮಾ ಲೋಚನೆ ಮಾಡುವುದು, ಮೀಸಲಾತಿ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡು ವುದು, ಶಿಕ್ಷಕರಿಗೆ ತರಬೇತಿಯನ್ನು ನೀಡುವುದು, ಕೈಪಿಡಿ ಒದಗಿಸುವುದು, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸು ವುದು ಹೀಗೆ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಇಲಾಖೆ ಹಮ್ಮಿಕೊಂಡಿದೆ.`ಹಿಂದಿನ ನ್ಯೂನ್ಯತೆಗಳನ್ನು ತಿದ್ದಿ ಕೊಂಡು ಫಲಿತಾಂಶವನ್ನು ಹೆಚ್ಚಿಸಲು ಅನೇಕ ಯೋಜನೆಗಳನ್ನು ಹಮ್ಮಿ ಕೊಳ್ಳಲಾಗಿದೆ. ಎಲ್ಲ ಶಾಲೆಗಳಿಗೆ ಫಲಿತಾಂಶದ ಬಗ್ಗೆ ವಿಶೇಷ ಗಮನ ಹರಿಸುವಂತೆ ಅಲ್ಲಿಯ ಮುಖ್ಯಾಧ್ಯಾಪಕರಿಗೆ, ಸಹ ಶಿಕ್ಷಕರಿಗೆ ಹೇಳಿದ್ದೇನೆ. ಈ ಬಾರಿ ಜಿಲ್ಲೆ ಹೆಚ್ಚಿನ ಫಲಿತಾಂಶ ದಾಖಲಿಸಲಿದೆ~ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಸ್.ಕುಮಾರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.