ಭಾನುವಾರ, ಜೂನ್ 13, 2021
25 °C

ಏಕಗವಾಕ್ಷಿ ವ್ಯವಸ್ಥೆಗಾಗಿ ತಮಟೆ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕಗವಾಕ್ಷಿ ವ್ಯವಸ್ಥೆಗಾಗಿ ತಮಟೆ ಚಳವಳಿ

ವಿಜಾಪುರ: ಪರಿಶಿಷ್ಠರ ಸಬಲೀಕರಣಕ್ಕೆ ವಿಶೇಷ ಘಟಕ ಯೋಜನೆಯ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯವರು ಬುಧವಾರ ಇಲ್ಲಿ ತಮಟೆ ಚಳವಳಿ ನಡೆಸಿದರು.ಸಚಿವ ಗೋವಿಂದ ಕಾರಜೋಳ ಅವರ ನಿವಾಸ, ಸಂಸದ ರಮೇಶ ಜಿಗಜಿಣಗಿ ಹಾಗೂ ಶಾಸಕ ವಿಠ್ಠಲ ಕಟಕಧೋಂಡ ಅವರ ಕಚೇರಿಯ ಎದುರು ತಮಟೆ ಚಳವಳಿ ನಡೆಸಿದರು.ದಲಿತರು ತಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಹಾರಾಷ್ಟ್ರದ ಮಾದರಿಯಂತೆ ಕರ್ನಾಟಕದಲ್ಲೂ ಎಕ ಗವಾಕ್ಷಿ ಪದ್ಧತಿ ಜಾರಿಗೆ ತರಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡ ಜಿತೇಂದ್ರ ಕಾಂಬಳೆ ಮಾತನಾಡಿ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಶಾಸಕರು- ಸಂಸದರು ಇದ್ದರೂ ದಲಿತರು ತುಳಿತಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರು ಪಾಲ್ಗೊಂಡಿದ್ದರು.ವಿಜ್ಞಾನ ಸಂವಹನಕಾರರ ಶಿಬಿರ

ಆಲಮಟ್ಟಿ: ವಿಜಾಪುರ ಜಿಲ್ಲಾ ವಿಜ್ಞಾನ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ವಿಜ್ಞಾನ ಬರಹಗಾರರ ಸಂವಹನ ಶಿಬಿರವನ್ನು ಮಾರ್ಚ 4 ರಂದು ವಿಜಾಪುರ ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಗ್ಯಾಲರಿ ಹಾಲ್‌ನಲ್ಲಿ  ಆಯೋಜಿಸಲಾಗಿದೆ.ಈ ಶಿಬಿರದಲ್ಲಿ ವೈಜ್ಞಾನಿಕ ಲೇಖನಗಳ ಬರೆಯುವ ಕೌಶಲ್ಯ, ವಿಜ್ಞಾನ ಬರಹಗಾರರ ಪರಸ್ಪರ ಸಂವಾದ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸುವ ವಿಜ್ಞಾನಸಕ್ತ ಬರಹಗಾರರು ತಮ್ಮ ಸ್ವಂತ ರಚನೆಯ ಒಂದು ಪುಟದ ಮಿತಿಯಲ್ಲಿ ಬರೆದ ಒಂದು ವೈಜ್ಞಾನಿಕ ಬರಹದೊಂದಿಗೆ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.

 

ಈ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ವಿಜ್ಞಾನ ಸಂವಹನಕಾರರಾದ ಶಿಕ್ಷಣ ತಜ್ಞ ಪ್ರೊ. ಎಂ.ಆರ್. ನಾಗರಾಜು, ಖ್ಯಾತ ಹವ್ಯಾಸಿ ಬರಹಗಾರ ಪೂರ್ಣಪ್ರಜ್ಞ ಬೇಳೂರು ಇವರು ಆಗಮಿಸಲಿದ್ದಾರೆ. ಆಸಕ್ತರು ನಾರಾಯಣ ಬಾಬಾನಗರ (9448 863701) ವಿಜಾಪುರ ಇವರನ್ನು ಸಂಪರ್ಕಿಸಬಹುದು ಎಂದು ವಿಜ್ಞಾನ ಸಮಿತಿಯ ಸದಸ್ಯರಾದ ಶರಣು ಹೀರಾಪೂರ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.