ಶುಕ್ರವಾರ, ಮೇ 7, 2021
23 °C

ಏಕಪಕ್ಷೀಯ ನಿರ್ಧಾರ: ಕುಂದ್ರಾ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ಬಿಸಿಸಿಐ ಕಾರ್ಯಕಾರಿ ಸಮಿತಿ ತೆಗೆದುಕೊಂಡಿರುವ ಅಮಾನತು ನಿರ್ಧಾರವನ್ನು ಟೀಕಿಸಿರುವ ರಾಯಲ್ಸ್ ಸಹ ಮಾಲೀಕ ರಾಜ್ ಕುಂದ್ರಾ `ಇದೊಂದು ಏಕಪಕ್ಷೀಯ ತೀರ್ಮಾನ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಬಿಸಿಸಿಐ ತೀರ್ಮಾನದಿಂದ ನನಗೆ ಆಘಾತವಾಗಿದೆ. ಮಾಧ್ಯಮಗಳು ಮತ್ತು ಕ್ರಿಕೆಟ್ ಮಂಡಳಿ ವಿನಾಕಾರಣ ನನ್ನನ್ನು ಬಲಿಪಶು ಮಾಡಿದವು' ಎಂದು ಉದ್ಯಮಿ ಕುಂದ್ರಾ ಕಟು ಪದಗಳಲ್ಲಿ ಟೀಕಿಸಿದ್ದಾರೆ.ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತೇನೆ ಎಂದಿರುವ ಕುಂದ್ರಾ ಕ್ರೀಡಾ ರಂಗದಲ್ಲಿ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಮತ್ತು ಮಂಡಳಿಯ ತೀರ್ಮಾನದ ಬಗ್ಗೆ ಬೇಸರ ವ್ಯಕ್ತಪಡಿಸಿದರು.`ಐಪಿಎಲ್ ಆಡಳಿತ ಮಂಡಳಿಯ ಸಭೆಗಳಲ್ಲಿ ತಂಡಗಳ ಮಾಲೀಕರಿಗೆ ಪಾಲ್ಗೊಳ್ಳಲು ಅವಕಾಶ ನೀಡಬೇಕು. ಐಪಿಎಲ್ ಆಡಳಿತ ಮಂಡಳಿ ತೆಗೆದುಕೊಳ್ಳುವ ನಿರ್ಧಾರದಲ್ಲೂ ಫ್ರಾಂಚೈಸ್‌ಗಳಿಗೆ ಅವಕಾಶ ಕಲ್ಪಿಸಬೇಕು. ಆದರೆ, ಭಾರತದಲ್ಲಿ ಅದಕ್ಕೆ ಅವಕಾಶ ಲಭಿಸುತ್ತಿಲ್ಲ' ಎಂದು ಹೇಳಿದರು.`ಐಪಿಎಲ್ ವಿವಾದಗಳಿಗೆ ಸಂಬಂಧಿಸಿದಂತೆ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ನೋವು ತಂದಿವೆ. ಬಿಸಿಸಿಐ ಅಮಾನತು ನಿರ್ಧಾರ ಕೈಗೊಂಡರೂ, ಮುಂದೊಂದು ದಿನ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆಯಿದೆ' ಎಂದು ಉದ್ಯಮಿ ಕುಂದ್ರಾ ಸೋಮವಾರ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.