ಏಕರೂಪದ ದರ ನಿಗದಿಗೆ ಮನವಿ

7
ರಾಷ್ಟ್ರೀಯ ಹೆದ್ದಾರಿಗೆ ಭೂಮಿ ನೀಡಿಕೆ

ಏಕರೂಪದ ದರ ನಿಗದಿಗೆ ಮನವಿ

Published:
Updated:

ದೊಡ್ಡಬಳ್ಳಾಪುರ: ತಾಲ್ಲೂಕಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೨೦೭ಕ್ಕೆ  ಭೂಮಿ, ಮನೆಗಳನ್ನು ಕಳೆದುಕೊಳ್ಳುವವರಿಗೆ ಸೂಕ್ತ ಬೆಲೆ ಹಾಗೂ ಪುನರ್‌ ವಸತಿ ಕಲ್ಪಿಸುವಂತೆ ಗುರುವಾರ ಬೆಂಗಳೂರಿ ನಲ್ಲಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟೇಶ್‌ ಅವರನ್ನು ಪ್ರಾಂತ ರೈತ ಸಂಘ ಹಾಗೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸದಸ್ಯರು ಸಭೆ ನಡೆಸಿದರು.ಸಭೆಯಲ್ಲಿ ಭಾಗವಹಿಸಿದ್ದ ಪ್ರಾಂತರ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರ ತೇಜಸ್ವಿ ಮಾಹಿತಿ ನೀಡಿ, ರಾಷ್ಟ್ರೀಯ ಹೆದ್ದಾರಿ 207ಕ್ಕೆ ಭೂ ಸ್ವಾಧೀನಪಡಿಸಿಕೊಳ್ಳುತ್ತಿರುವ ಹಿನ್ನೆಲೆ ಯಲ್ಲಿ ನಿವೇಶನಗಳ ದರ ನಿಗದಿಯಲ್ಲಿ ಹತ್ತಾರು ದರ ನಿಗದಿ ಮಾಡಿರುವು ದನ್ನು ಕೈ ಬಿಟ್ಟು ಏಕರೀತಿಯ ದರ ನಿಗದಿ ಯಾಗಬೇಕು ಎಂದು ಒತ್ತಾಯಿಸಿದ್ದಾಗಿ ಹೇಳಿದರು.‘ಕೇಂದ್ರ ಸರ್ಕಾರಿ ಜಾರಿಗೆ ತಂದಿರುವ ಹೊಸ ಭೂ ಸ್ವಾಧೀನ ಕಾಯಿದೆ ಪ್ರಕಾರ ಮನೆಗಳನ್ನು ಕಳೆದು ಕೊಳ್ಳುವ ನಿವೇಶನ ರಹಿತರಿಗೆ  ಹಣ ನೀಡಿದರಷ್ಟೇ ಸಾಲದು ಪುನರ್ವಸತಿ ಕಲ್ಪಿಸಬೇಕು. ಹೊಸದಾಗಿ ನಿರ್ಮಾಣ ವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೨೦೭ಕ್ಕೆ ದಾಬಸ್‌ಪೇಟೆಯಿಂದ ಹೊಸ ಕೋಟೆ ತಾಲ್ಲೂಕಿನರೆಗೆ ಹತ್ತಾರು ಬಗೆ ಯ ದರಗಳನ್ನು ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಹೊಸ ಕಾಯ್ದೆಯಡಿ ಮಾರುಕಟ್ಟೆ ದರಕ್ಕಿಂತ ೪ ಪಟ್ಟು ಹಣ ನೀಡಬೇಕು. ಭೂಮಿಗೆ ಕನಿಷ್ಠ ೫೦ ರಿಂದ ಗರಿಷ್ಠ ೮೦ ಲಕ್ಷ ನಿಗದಿ ಪಡಿಸಬೇಕು.ಭಾಗಶಃ ಭೂಮಿ ಮತ್ತು ಮನೆಗಳು ಸ್ವಾಧೀನವಾದ ನಂತರವೂ ಉಳಿದಲ್ಲಿ ಅವುಗಳಿಗೆ ಪೂರ್ಣ ಪ್ರಮಾಣದ ಪರಿ ಹಾರ ನೀಡಬೇಕು. ಕೃಷಿ ಭೂಮಿಯಲ್ಲಿ ಮನೆ ಕಟ್ಟಿ ಕೊಂಡಿರುವ ರೈತರಿಗೆ ದಾಖ ಲಾತಿಗಳನ್ನು ಒದಗಿಸುವಂತೆ ಮನವಿ ಮಾಡಲಾಗಿದೆ ಎಂದರು.ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ರುವ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟೇಶ್‌ ಮೂರು ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖ ದಲ್ಲಿ ಸಭೆ ನಡೆಸಿ ನಿರ್ಧಿರಿಸಲಾಗುವುದು ಎಂದರು. ಸಭೆಯಲ್ಲಿ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿ.ಬೈಯ್ಯಾರೆಡ್ಡಿ, ಮಹೇಶ್‌, ನಟ ರಾಜ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry