ಏಕರೂಪದ ವಿದ್ಯುತ್ ಜಾಲ...

7
ಸುದ್ದಿ ಹಿನ್ನಲೆ

ಏಕರೂಪದ ವಿದ್ಯುತ್ ಜಾಲ...

Published:
Updated:

ಸರ್ಕಾರಿ ಒಡೆತನದ ವಿದ್ಯುತ್‌ ಜಾಲ ನಿಗಮವು (ಪಿಜಿಸಿಎಲ್‌), ಉತ್ತರ  ಮತ್ತು ದಕ್ಷಿಣ ಗ್ರಿಡ್‌ಗೆ  ಸಂಪರ್ಕ ಕಲ್ಪಿಸಿದೆ. ರಾಯಚೂರು  ಸೋಲಾ­ಪುರ 765 ಕೆವಿ ಮಾರ್ಗವು ಈಗ ರಾಷ್ಟ್ರೀಯ ವಿದ್ಯುತ್ ಪೂರೈಕೆ ಜಾಲಕ್ಕೆ ಸೇರ್ಪಡೆಯಾಗಿದೆ. ಏಕ­ರೂಪದ ವಿದ್ಯುತ್ ಜಾಲ ನಿರ್ಮಾಣಕ್ಕೆ ರೂ 815 ಕೋಟಿ ವೆಚ್ಚವಾಗಿದೆ.ಈ ಮೂಲಕ ಒಂದು ದೇಶ - ಒಂದು ವಿದ್ಯುತ್ ಜಾಲ ಮತ್ತು ಒಂದು ವ್ಯವಸ್ಥೆ ಜಾರಿಗೆ ಬಂದಂತೆ ಆಗಿದೆ. ಇದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ರಾಜ್ಯಗಳಿಂದ ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯಗಳು ಅದ­ರಲ್ಲೂ ದಕ್ಷಿಣದ ರಾಜ್ಯಗಳಿಗೆ ಸುಲಭ­ವಾಗಿ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗಲಿದೆ.ದಕ್ಷಿಣದ ವಿದ್ಯುತ್ ಪೂರೈಕೆ ಜಾಲ­ವನ್ನು ರಾಷ್ಟ್ರೀಯ ವಿದ್ಯುತ್ ಜಾಲದ ಜೊತೆ ಸೇರ್ಪಡೆ ಮಾಡುವುದರಿಂದ ದಕ್ಷಿಣದ ರಾಜ್ಯಗಳ ಪ್ರಾದೇಶಿಕ ವಿದ್ಯುತ್ ಸಾಗಣೆ ಸಾಮರ್ಥ್ಯ ಹೆಚ್ಚಳಗೊಳ್ಳು­ವುದರ ಜತೆಗೆ, ಕೆಲ ಮಾರ್ಗಗಳಲ್ಲಿನ ದಟ್ಟಣೆಯೂ ತಗ್ಗಲಿದೆ.ಪ್ರಯೋಜನಗಳು: ಕೈಗಾರಿಕಾ ಚಟುವ­ಟಿಕೆ­­ಗಳಿಗೂ ಅಗತ್ಯವಾದ ವಿದ್ಯುತ್ ಸಮ­ರ್ಪಕ­ವಾಗಿ ಪೂರೈಕೆ­ಯಾಗಿ ಆರ್ಥಿಕ ಬೆಳವಣಿಗೆಗೆ ನೆರ­ವಾಗಲಿದೆ.ಇದುವರೆಗೆ ತೀವ್ರ ವಿದ್ಯುತ್ ಕೊರತೆ ಕಾರಣಕ್ಕೆ ದಕ್ಷಿಣದ ರಾಜ್ಯಗಳು ವಿದ್ಯುತ್ ಖರೀದಿ ಸಮಸ್ಯೆ ಎದುರಿಸುತ್ತಿದ್ದವು. ಹೆಚ್ಚು­ವರಿ ಉತ್ಪಾದನೆ ಮಾಡುತ್ತಿದ್ದ ರಾಜ್ಯಗಳು ಪ್ರತ್ಯೇಕ ವಿದ್ಯುತ್ ಸಾಗಾಣಿಕೆ ವ್ಯವಸ್ಥೆ ಹೊಂದಿದ್ದರಿಂದ ಈ ರಾಜ್ಯಗಳು ನೇರವಾಗಿ ವಿದ್ಯುತ್ ಪಡೆಯಲು ಸಾಧ್ಯ­ವಾ­ಗುತ್ತಿರಲಿಲ್ಲ. ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿದ್ದ ರಾಜ್ಯಗಳೂ ವಿದ್ಯುತ್ ಮಾರಾಟ ಮಾಡಲು ಹಲವು ಅಡೆತಡೆ ಎದುರಿಸುತ್ತಿದ್ದವು. ಇನ್ನುಮುಂದೆ ಒಂದೇ ಸಾಗಾಣಿಕೆ ಮಾರ್ಗ­ದಲ್ಲಿ ವಿದ್ಯುತ್ ಪೂರೈಕೆ ಮಾಡು­­ವುದರಿಂದ ಸೋರಿಕೆ ತಡೆಗ­ಟ್ಟಲು ಮತ್ತು ಪೂರೈಕೆಯಲ್ಲಿ ಇದಕ್ಕೂ ಮೊದಲು ಎದುರಾಗುತ್ತಿದ್ದ ದೋಷ ಪರಿಹರಿಸಲು ಸಾಧ್ಯವಾಗಲಿದೆ.ವಿದ್ಯುತ್ ಅಗ್ಗ?: ಸದ್ಯ ಬೇರೆ, ಬೇರೆ ರಾಜ್ಯಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ ಭಿನ್ನವಾಗಿದೆ. ಕೆಲ ರಾಜ್ಯಗಳಲ್ಲಿ ಪ್ರತಿ ಯೂನಿಟ್‌ಗೆ ರೂ 5 ಇದ್ದರೆ, ಇತರ ಕೆಲ ರಾಜ್ಯಗಳಲ್ಲಿ ಇದು ರೂ 15ರಿಂದ ರೂ 20ರ­ವರೆಗೆ ಇದೆ. ಈ ವ್ಯತ್ಯಾಸ ಇನ್ನು ಮುಂದೆ ಕಡಿಮೆ­ಯಾಗಲಿದೆ. ದೇಶದಲ್ಲಿ ಉತ್ಪಾ­ದನೆ­ಯಾಗುವ ಒಟ್ಟು ವಿದ್ಯುತ್, ಈಗ ಒಂದೇ ಪೂರೈಕೆ ಜಾಲಕ್ಕೆ ಸೇರ್ಪಡೆ­ಯಾ­ಗು­ವುದರಿಂದ ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 2,32,000 ಮೆ.ವಾ. ತಲುಪಲಿದೆ.ರಾಜ್ಯಗಳಿಗೆ ಹೆಚ್ಚು ಲಾಭ: ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಹೆಚ್ಚು ಪ್ರಯೋಜನ ಪಡೆಯ­ಲಿವೆ. ದೇಶದ ಇತರ ರಾಜ್ಯಗಳಿಗೆ ಹೋಲಿ­ಸಿದರೆ ದಕ್ಷಿಣದ ರಾಜ್ಯಗಳಲ್ಲಿ ವಿದ್ಯುತ್ ಸಾಗಣೆ ವ್ಯವಸ್ಥೆ ಚೆನ್ನಾಗಿದೆ. ಈ ಕಾರಣಕ್ಕೆ ವಿದ್ಯುತ್ ಜಾಲ ನಿಗಮವು ದೇಶದಲ್ಲಿನ ಇತರ ವಲಯಗಳನ್ನು  ರಾಷ್ಟ್ರೀಯ ಜಾಲಕ್ಕೆ ಸೇರ್ಪಡೆ ಮಾಡಲು ಮೊದಲ ಆದ್ಯತೆ ನೀಡಿತ್ತು.5 ವಿದ್ಯುತ್ ಜಾಲ: ದೇಶದಲ್ಲಿ ಸದ್ಯಕ್ಕೆ ಒಟ್ಟು 5 ವಿದ್ಯುತ್ ಜಾಲಗಳು ಕಾರ್ಯ­ನಿರ್ವಹಿಸುತ್ತಿವೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಜಾಲ­ಗಳು. ಈಗ ದಕ್ಷಿಣದ ಜಾಲವು ಅಂತಿಮ­ವಾಗಿ ರಾಷ್ಟ್ರೀಯ ಜಾಲಕ್ಕೆ ಸೇರ್ಪಡೆ­ಯಾ­ಗಿದೆ. ಇದರಿಂದ  ದೇಶಿ ವಿದ್ಯುತ್ ಪೂರೈಕೆ ವ್ಯವಸ್ಥೆಯು ವಿಶ್ವದ ಅತಿದೊಡ್ಡ ವಿದ್ಯುತ್ ಪೂರೈಕೆ ವ್ಯವಸ್ಥೆ­ಗಳಲ್ಲಿ ಒಂದಾ­ಗ­ಲಿದ್ದು, ಒಟ್ಟು ಸಾಮರ್ಥ್ಯ 232 ಗಿಗಾ ವಾಟ್‌ಗಳಷ್ಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry