ಏಕಸ್ವಾಮ್ಯ ಮೆರೆದ ಬಸೀರಾ

7

ಏಕಸ್ವಾಮ್ಯ ಮೆರೆದ ಬಸೀರಾ

Published:
Updated:

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಗದಗ ಜಿಲ್ಲೆಯ ಬಸೀರಾ ವಕಾರದ, ಸ್ಥಳೀಯ ಬಿಎಲ್‌ಡಿಇಎ ಪದವಿಪೂರ್ವ ಕಾಲೇಜು ಅಶ್ರಯದಲ್ಲಿ ಜರುಗಿದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಏಕಸ್ವಾಮ್ಯ ಮೆರೆದರು. ರಸ್ತೆ ರೇಸ್ ಹಾಗೂ ಟೈಮ್ ಟ್ರಯಲ್ ವಿಭಾಗಗಳ ಪ್ರಥಮ ಸ್ಥಾನವನ್ನು ಅವರು ಬಗಲಿಗೆ ಹಾಕಿಕೊಂಡರು.ಬಾಲಕರ ವಿಭಾಗದಲ್ಲಿ 18 ಕಿ.ಮೀ.ರಸ್ತೆ ರೇಸ್‌ನಲ್ಲಿ ವಿಜಾಪುರ ಜಿಲ್ಲೆಯ ಸಚಿನ್ ಪವಾರ ಮೊದಲಿಗರಾದರೆ ಬೆಳಗಾವಿ ಜಿಲ್ಲೆಯ ಬಸವರಾಜ ದಳವಾಯಿ 19 ಕಿ.ಮೀ. ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಮೊದಲಿಗರಾಗಿ ಗುರಿ ತಲುಪಿದರು.ಫಲಿತಾಂಶಗಳು ಇಂತಿವೆ.

ಬಾಲಕರ ವಿಭಾಗ:

18 ಕಿ.ಮೀ. ರಸ್ತೆ ರೇಸ್: ಸಚಿನ್ ಪವಾರ (ಬಂಜಾರಾ ಕಾಲೇಜು ವಿಜಾಪುರ)-1, ವಿಠ್ಠಲ ಹಳಬರ (ಎಸ್‌ಕೆವಿಎಂಎಸ್ ಕಾಲೇಜು ವಿಜಾಪುರ)-2, ಬಸವರಾಜ ದಳವಾಯಿ (ಎಸ್‌ಪಿಎಂ ಕಾಲೇಜು ಧರ್ಮಟ್ಟಿ, ಬೆಳಗಾವಿ ಜಿಲ್ಲೆ)-3. (ಕಾಲ: 38:48.85).

19 ಕಿ.ಮೀ. ಟೈಮ್ ಟ್ರಯಲ್: ಬಸವರಾಜ ದಳವಾಯಿ-1, ಸಚಿನ್ ಪವಾರ-2, ವಿಠ್ಠಲ ಹಳಬರ-3.ಬಾಲಕಿಯರ ವಿಭಾಗ:

15 ಕಿ.ಮೀ.ರಸ್ತೆ ರೇಸ್: ಬಸೀರಾ ವಕಾರದ (ಬಿಎಚ್‌ಪಾಟೀಲ ಕಾಲೇಜು ಲಕ್ಕುಂಡಿ, ಗದಗ ಜಿಲ್ಲೆ)-1, ಪ್ರೇಮಾ ಹುಚ್ಚನ್ನವರ (ಬಿಎಚ್‌ಪಾಟೀಲ ಕಾಲೇಜು ಲಕ್ಕುಂಡಿ)-2, ರತಿ ಎಚ್.ಸಿ. (ಸೇಂಟ್ ಅಂಥೋನಿ ಕಾಲೇಜು ಬೆಂಗಳೂರು)-3. (ಕಾಲ: 23:19.51).

10 ಕಿ.ಮೀ. ಟೈಮ್ ಟ್ರಯಲ್: ಬಸೀರಾ ವಕಾರದ-1, ರತಿ ಎಚ್.ಸಿ-2, ಪ್ರೇಮಾ ಹುಚ್ಚನ್ನವರ -3. (ಕಾಲ: 11:18.95).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry