ಸೋಮವಾರ, ಜೂನ್ 14, 2021
27 °C
ಎಕ್ಸಲೆಂಟ್ ಕೋಚಿಂಗ್ ಸೆಂಟರ್‌ ಉಚಿತ ಕಾರ್ಯಾಗಾರ ಉದ್ಘಾಟನೆ

ಏಕಾಗ್ರತೆಯಿಂದ ಉತ್ತಮ ಸಾಧನೆ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಐಎಎಸ್‌, ಐಪಿಎಸ್‌, ಕೆಎಎಸ್‌ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು  ಏಕಾಗ್ರತೆ­ಯಿಂದ ಅಭ್ಯಾಸ ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ಸಲಹೆ ನೀಡಿದರು.ಕೆಎಎಸ್, ಪಿಎಸ್ಐ, ಕೆಎಸ್ಆರ್‌ಪಿ (ಪಿಸಿ), ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವವರಿಗಾಗಿ ನಗರದ ಎಕ್ಸಲೆಂಟ್ ಕೋಚಿಂಗ್ ಸೆಂಟರ್‌ನಲ್ಲಿ ಏರ್ಪಡಿಸಿರುವ ಉಚಿತ ಕಾರ್ಯಾಗಾರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ತರಬೇತಿ ಪಡೆದು ಸ್ವಂತ ಬುದ್ಧಿ ಬಳಸಿ ಪರೀಕ್ಷೆಗಳಿಗೆ ಹಾಜರಾಗುವುದು ಲೇಸು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಎ.ನಾಗರಾಜು, ಅಭ್ಯರ್ಥಿಗಳು ದೈಹಿಕ ಸಮರ್ಥತೆಯನ್ನು ಹೊಂದಬೇಕು. ಕೌಟುಂಬಿಕವಾಗಿ ಎಷ್ಟೇ ಸಮಸ್ಯೆ­ಗಳಿದ್ದರೂ ಅದರತ್ತ ಗಮನಹರಿಸದೆ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಉತ್ತಮ ಭವಿಷ್ಯ ರೂಪಿಸಿ­ಕೊಳ್ಳಬೇಕು ಎಂದರು. ಕಾನ್‌ಸ್ಟೆಬಲ್ ಹಂತದಿಂದ ಉನ್ನತ ಸ್ಥಾನವನ್ನು ಪಡೆಯುವಲ್ಲಿ ಪಟ್ಟ ಶ್ರಮದ ಕುರಿತು ವಿವರಿಸಿದರು.ಬಂಗಾರಪೇಟೆ ಸರ್ಕಾರಿ ಪದವಿ­ಪೂರ್ವ ಕಾಲೇಜು ಉಪನ್ಯಾಸಕ ನಾಗಾನಂದ ಕೆಂಪರಾಜ್, ಪ್ರಸ್ತುತ ದಿನಗಳಲ್ಲಿ ಉತ್ತಮ ವ್ಯಾಸಂಗ ಮಾಡಿ­ದರೆ  ಮಾತ್ರ ಯಶಸ್ಸು ಸಾಧ್ಯ. ಸತತ ಅಭ್ಯಾಸ ಹಾಗೂ ಸಂಪನ್ಮೂಲಗಳ ಕ್ರೋಡೀಕರಣ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಬಹುದು ಎಂದರು.ಗಣಿತ ತಜ್ಞ ಸಿ.ವಿ.ನಾರಾಯಣ­ಸ್ವಾಮಿ, ಸೂಲೂರು ಸರ್ಕಾರಿ ಪ್ರೌಢ­ಶಾಲೆ ಮುಖ್ಯಶಿಕ್ಷಕ ಬಾಲಾಜಿ ಮಾತ­ನಾಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಲಕ್ಷ್ಮೀನಾರಾಯಣ, ನಿವೃತ್ತ ಶಿಕ್ಷಕ ಎಂ.ಎನ್.ನಾರಾ­ಯಣ­ಸ್ವಾಮಿ, ಮುಖಂಡರಾದ ಕೈಲಾಸ್, ಉಪನ್ಯಾಸಕರಾದ ಲಕ್ಷ್ಮಣ್, ತಿಮ್ಮ­ರಾಯಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.