ಏಕೀಕರಣ: ಕೆಂಗಲ್ ಕೊಡುಗೆ ಅಪಾರ

7

ಏಕೀಕರಣ: ಕೆಂಗಲ್ ಕೊಡುಗೆ ಅಪಾರ

Published:
Updated:

ಬೆಂಗಳೂರು:`ಅಧಿಕಾರ ಹೋದರೂ ಚಿಂತೆ ಇಲ್ಲ. ಕನ್ನಡಿಗರೆಲ್ಲ ಒಂದೇ ರಾಜ್ಯದ ಆಡಳಿತಕ್ಕೆ ಒಳಪಡಬೇಕು ಎಂಬ ಆಸೆಯಿಂದ ಏಕೀಕರಣಕ್ಕೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.ಹನುಮಂತಯ್ಯನವರ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, `ಕುರ್ಚಿಗಾಗಿ ಎಂದೂ ಆಸೆಪಡದ ಹನುಮಂತಯ್ಯನವರು ಯಾವತ್ತೂ ಚಿಂತಿಸಿದ್ದು ರಾಜ್ಯದ ಅಭಿವೃದ್ಧಿಯ ಕುರಿತು ಮಾತ್ರ~ ಎಂದು ಪ್ರಶಂಸಿಸಿದರು.

`ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಭೇಟಿ ಮಾಡಿದ್ದೆ.

 

ಆಗ ಅವರು ಹೇಳಿದ ಒಂದು ಘಟನೆ ನೆನಪಿಗೆ ಬರುತ್ತಿದೆ~ ಎಂದ ಮುಖ್ಯಮಂತ್ರಿಗಳು, `ರಾಜ್ಯದ ಏಕೀಕರಣದ ಪರವಾಗಿ ನಿಲ್ಲದಂತೆ ಹನುಮಂತಯ್ಯ ಅವರ ಮೇಲೆ ಬಹಳಷ್ಟು ಮಂದಿ ಒತ್ತಡ ಹೇರಿದ್ದರು. ಕರ್ನಾಟಕದ ಏಕೀಕರಣವಾದರೆ ನಿಮ್ಮ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂಬ ಎಚ್ಚರಿಕೆಯನ್ನೂ ಅವರ ಆಪ್ತರು ನೀಡಿದ್ದರು.ಆದರೆ ಇದನ್ನೆಲ್ಲ ಲೆಕ್ಕಿಸದೆ ನಾಡಿನ ಏಕೀಕರಣದ ಪರವಾಗಿ ನಿಂತವರು ಅವರು~ ಎಂದು ಹೇಳಿದರು.

ಸಚಿವರಾದ ಎಸ್.ಎ. ರಾಮದಾಸ್, ಸಿ.ಪಿ. ಯೋಗೇಶ್ವರ್, ಶಾಸಕರಾದ ಸಿ.ಟಿ. ರವಿ, ಸಿ.ಎಸ್. ಅಶ್ವತ್ಥ ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry