ಏಕೀಕರಣ ಹೋರಾಟಗಾರರಿಗೆ ಮಾಸಾಶನ: ಬಿದರಿ ಒತ್ತಾಯ

7

ಏಕೀಕರಣ ಹೋರಾಟಗಾರರಿಗೆ ಮಾಸಾಶನ: ಬಿದರಿ ಒತ್ತಾಯ

Published:
Updated:

ಬೆಂಗಳೂರು: `ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರಂತೆ ಪರಿಗಣಿಸಿ ಸರ್ಕಾರ ಅವರಿಗೂ ಮಾಸಾಶನ ನೀಡಬೇಕು' ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯು ಸೋಮವಾರ ಪುರಭವನದಲ್ಲಿ ಏರ್ಪಡಿಸಿದ್ದ `ಅಮರ ಮಧುರ ಗೀತ-ಗಾಯನ ಸಂಭ್ರಮ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಕರ್ನಾಟಕದ ಏಕೀಕರಣಕ್ಕಾಗಿ, ಭಾಷೆಗಾಗಿ ಹೋರಾಡಿದವರೂ ಹೋರಾಟಗಾರರೇ ಆಗಿದ್ದಾರೆ. ಅವರಿಗೆ ನೆಮ್ಮದಿಯ ಜೀವನವನ್ನು ನೀಡಲು ಮಾಸಾಶನವನ್ನು ನೀಡಬೇಕು. ಜತೆಗೆ ಸಂಗೀತ ಕಲಾವಿದರು ಹಾಗೂ ವಾದ್ಯಗೋಷ್ಠಿಗಳ ಹಾಡುಗಾರರಿಗೂ ಗೌರವಯುತ ಜೀವನವನ್ನು ನಡೆಸಲು ಮಾಸಾಶನ ಜತೆಗೆ ನಿವೇಶನ ನೀಡಬೇಕು' ಎಂದು ಒತ್ತಾಯಿಸಿದರು.`ನಾಡಿಗಾಗಿ ಹೋರಾಡಿದವರ ಹೆಸರೇ ಯಾರಿಗೂ ನೆನಪಿನಲ್ಲಿ ಇಲ್ಲ. ನಮ್ಮ ಅಸ್ತಿತ್ವಕ್ಕಾಗಿ ಹೋರಾಡಿದವರ ಬಗ್ಗೆ ಕಿಂಚಿತ್ತಾದರೂ ಕೃತಜ್ಞತಾ ಭಾವ ಇರಬೇಕು' ಎಂದರು.ಗಾಯನ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry