ಏಕ ಬ್ರಾಂಡ್ ಎಫ್‌ಡಿಐ: 3 ಪ್ರಸ್ತಾವ ಅನುಮೋದನೆ

7

ಏಕ ಬ್ರಾಂಡ್ ಎಫ್‌ಡಿಐ: 3 ಪ್ರಸ್ತಾವ ಅನುಮೋದನೆ

Published:
Updated:

ನವದೆಹಲಿ(ಪಿಟಿಐ): ದೇಶದ ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ರೂ.106 ಕೋಟಿ ಮೊತ್ತದ ಮೂರು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪ್ರಸ್ತಾವಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ.ಅಮೆರಿಕ ಮೂಲದ ಜವಳಿ ಉದ್ಯಮ  ಸಂಸ್ಥೆ ಬ್ರೂಕ್ಸ್ ಬ್ರದರ್ಸ್,  ಇಂಗ್ಲೆಂಡ್‌ನ ಪಾದರಕ್ಷೆ ತಯಾರಿಕೆ ಕಂಪೆನಿ ಚೈನ್ ಪವರ್ಸ್, ಇಟಲಿ ಮೂಲದ ಚಿನ್ನಾಭರಣ ಕಂಪೆನಿ ಡಮೀಯ್ನಿ ಪ್ರಸ್ತಾವ ಗಳನ್ನು ವಿದೇಶಿ ನೇರ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ) ಇತ್ಯರ್ಥಗೊಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry