ಏಗಾನ್ ರೆಲಿಗೇರ್: ನವೀಕೃತ ಐ-ಟರ್ಮ್ ಯೋಜನೆ

7

ಏಗಾನ್ ರೆಲಿಗೇರ್: ನವೀಕೃತ ಐ-ಟರ್ಮ್ ಯೋಜನೆ

Published:
Updated:

ಬೆಂಗಳೂರು: ದೇಶದಲ್ಲಿ ಇಂಟರ್‌ನೆಟ್ ಮೂಲಕ ವಿಮೆ ಸೌಲಭ್ಯ ಪಡೆಯುವುದು ಕ್ರಮೇಣ ಜನಪ್ರಿಯ ಳ್ಳುತ್ತಿದ್ದು, ಸದ್ಯಕ್ಕೆ 7 ರಿಂದ 8 ವಿಮೆ ಸಂಸ್ಥೆಗಳು ಇಂತಹ ಸೌಲಭ್ಯ ಒದಗಿಸುತ್ತಿವೆ ಎಂದು ಏಗಾನ್ ರೆಲಿಗೇರ್ ಲೈಫ್ ಇನ್ಸೂರನ್ಸ್ (ಎಆರ್‌ಎಲ್‌ಐ)  ಸಂಸ್ಥೆಯ ಮುಖ್ಯ ಮಾರುಕಟ್ಟೆ ಅಧಿಕಾರಿ ಯತೀಶ್ ಶ್ರೀವಾಸ್ತವ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.2009ರಲ್ಲಿ ಮೊದಲ ಬಾರಿಗೆ ಇಂಟರ್‌ನೆಟ್ ಮೂಲಕವೇ ವಿಮೆ ಸೌಲಭ್ಯ ಪಡೆಯುವ ಸೇವೆಯನ್ನು `ಎಆರ್‌ಎಲ್‌ಐ~ ಜಾರಿಗೆ ತಂದಿತು.    ಈಗ ಆನ್‌ಲೈನ್ ವಿಮೆ ವಹಿವಾಟು ಜನಪ್ರಿಯಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಗ್ರಾಹಕರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಪರಿಷ್ಕೃತಗೊಂಡ `ಏಗಾನ್ ರೆಲಿಗೇರ್ ಐ-ಟರ್ಮ್~ ಯೋಜನೆ ಪ್ರಕಟಿಸಿದೆ ಎಂದರು.ಪಾಲಿಸಿದಾರರ ಅಗತ್ಯಗಳಿಗೆ ತಕ್ಕಂತೆ ಹಳೆಯ ಯೋಜನೆಯಲ್ಲಿ ಅನೇಕ ಹೊಸ ಸೌಲಭ್ಯಗಳನ್ನು ಸೇರಿಸಲಾಗಿದೆ. ಜೀವ  ವಿಮೆ ಪರಿಹಾರ, ಅನಾರೋಗ್ಯ  ಪರಿಹಾರ ರೂಪದಲ್ಲಿ ವಿಮೆ ಮೊತ್ತದ ಶೇ 25ರಷ್ಟು ಮೊತ್ತವನ್ನು ತಕ್ಷಣವೇ ಪಾವತಿಸುವ ಸೌಲಭ್ಯ ಕಲ್ಪಿಸಲಾಗಿದೆ.ಜತೆಗೆ ಆಕಸ್ಮಿಕ ಸಾವು, ಗಂಭೀರ ಸ್ವರೂಪದ ಕಾಯಿಲೆ ಸಂದರ್ಭದಲ್ಲಿ ಕಂತು ರದ್ದುಪಡಿಸುವ ಅಥವಾ ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆಗಳನ್ನು ವಿಮೆ ವ್ಯಾಪ್ತಿಗೆ ತರುವ ಮೂರು ನಿಬಂಧನೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ಇರುವುದು ಈ ಪರಿಷ್ಕೃತ ಯೋಜನೆಯ ಇತರ ವೈಶಿಷ್ಟ್ಯಗಳಾಗಿವೆ ಎಂದರು. ಯೋಜನೆಗೆ 18 ರಿಂದ 65 ವರ್ಷದವರು ಸೇರ್ಪಡೆ ಗೊಳ್ಳಬಹುದು. ಕನಿಷ್ಠ ವಿಮೆ ಪರಿಹಾರ ಮೊತ್ತ 10 ಲಕ್ಷ ಇದೆ. ಕನಿಷ್ಠ ವಿಮೆ ಅವಧಿ 5 ವರ್ಷ, ಗರಿಷ್ಠ ಅವಧಿ 57 ವರ್ಷ ಆಗಿದೆ ಎಂದರು.ಠಿಠಿ://ಚ್ಠಿಟ್ಞ್ಝಜ್ಞಿಛಿ.ಛಿಜಟ್ಞ್ಟಛ್ಝಿಜಿಜಚ್ಟಛಿ.್ಚಟಞ ತಾಣದಲ್ಲಿ ಹೆಚ್ಚಿನ ಮಾಹಿತಿ ಲಭ್ಯ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry