ಏಡ್ಸ್- ಜನ ಜಾಗೃತಿ ಅಗತ್ಯ

7

ಏಡ್ಸ್- ಜನ ಜಾಗೃತಿ ಅಗತ್ಯ

Published:
Updated:

ವಿಜಯಪುರ: ಲೈಂಗಿಕ ಹಸಿವನ್ನು ಈಡೇರಿಸಿಕೊಳ್ಳಲು ಹಾತೊರೆಯುವ ಯುವಪೀಳೀಗೆಯಲ್ಲಿ ಏಡ್ಸ್ ಕುರಿತ ಅರಿವು ಕಡಿಮೆ ಇರುವುದರಿಂದ ಮಾರಕ ರೋಗವು ಅಧಿಕವಾಗಿ ಹರಡುತ್ತಿದೆ ಎಂದು ಏಡ್ಸ್ ಪ್ರಿವೆಂನ್ಷನ್ ಸೊಸೈಟಿಯ ಸಂಚಾಲಕ ಕೆ.ಎಸ್.ನಾಗಭೂಷಣ್ ತಿಳಿಸಿದರು.

ಅವರು ಇಲ್ಲಿನ ಪುರಸಭೆಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂನ್ಷನ್ ಸೊಸೈಟಿ, ಬೆಂಗಳೂರು ಗ್ರಾಮಾಮತರ ಜಿಲ್ಲಾಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಏಡ್ಸ್‌ಗೆ ಕಾರಣಗಳು, ಸುರಕ್ಷಿತ ಲೈಂಗಿಕತೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು. ಜಾದೂ ಮೂಲಕ ಏಡ್ಸ್ ಬಗ್ಗೆ ಅರಿವು ಮೂಡಿಸಲಾಯಿತು. ಬಿಜ್ಜವಾರ ಸುಬ್ರಮಣಿ, ಮುನಿನಾರಾಯಣಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry