ಸೋಮವಾರ, ಜನವರಿ 20, 2020
18 °C

ಏಡ್ಸ್ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಪಲ್ಲೇದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ‘ಏಡ್ಸ್ ನಂತಹ ಭಯಾನಕ ರೋಗ ಬಾರದಂತೆ ಸುರಕ್ಷಿತ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಏಡ್ಸ್‌ ರೋಗಕ್ಕೆ ಇದುವರೆಗೂ ಚಿಕಿತ್ಸೆ ಇಲ್ಲದೇ ಇರುವುದನ್ನು ಪ್ರತಿಯೊಬ್ಬರು ಅರಿತುಕೊಂಡು ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು’ ಎಂದು ಸಿವಿಲ್‌ ನ್ಯಾಯಾಧೀಶ ಪಲ್ಲೇದ ರವೀಂದ್ರ ಹೇಳಿದರು.ಸ್ಥಳೀಯ ತಾಲ್ಲೂಕು ಪಂಚಾಯಿತಿ  ಸಭಾಂಗಣದಲ್ಲಿ  ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೖದ್ಧಿ ನಿಗಮದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾ ಚರಣೆ ಅಂಗವಾಗಿ ಭಾನುವಾರ ಹಮ್ಮಿ ಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಿಕ್ಷಣದ ಕೊರತೆಯಿಂದ ದೇವದಾಸಿ ಪದ್ಧತಿಗೆ ಒಳಗಾಗುತ್ತಾರೆ.  ಶಿಕ್ಷಣದಿಂದ ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ. ಈಗಿರುವ ದೇವದಾಸಿ ಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮಹಿಳಾ ಅಭಿವೖದ್ಧಿ ನಿಗಮದ ದೇವದಾಸಿ ಪುನರ್ ವಸತಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಎಸ್.ಡಿ. ವಾಲೀಕಾರ, ಸರ್ಕಾರ ಮಾಜಿ ದೇವದಾಸಿಯರಿಗೆ ಅನೇಕ ಸೌಲಭ್ಯ ಗಳನ್ನು ನೀಡುತ್ತಿದೆ. ಅದರ ಸದುಪ ಯೋಗ ಪಡಿಸಿಕೊಂಡು ದೇವದಾಸಿ ಪದ್ಧತಿಯಿಂದ ಹೊರಬೇಕು ಎಂದು ಹೇಳಿದರು.ಮಾಜಿ ದೇವದಾಸಿ ಪುನರ್ ವಸತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ನಿವೇಶನ ಹೊಂದಿರುವ  2248 ದೇವ ದಾಸಿಯರಿಗೆ ಮನೆ ನಿರ್ಮಿಸಲಾಗಿದೆ. ಅಲ್ಲದೇ ಅವರಿಗೆ ಕಳೆದ ಮೂರು ತಿಂಗಳಿನಿಂದ ಆನ್ ಲೈನ್ ಮೂಲಕವೇ ಮಾಸಾಶನ ವಿತರಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಯಾರು ಇದುವರೆಗೂ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿಲ್ಲ. ಅಂತಹವರು ತಕ್ಷಣವೇ ಮಾಹಿತಿ ನೀಡಬೇಕು ಎಂದರು.ವಕೀಲರ ಸಂಘದ ತಾಲ್ಲೂಕು ಘಟ ಕದ ಅಧ್ಯಕ್ಷ ಎಚ್‌.ಎಸ್.ಗುರಡ್ಡಿ, ವಕೀಲ ಎಂ.ಎಸ್. ಗೊಳಸಂಗಿ ಮಾತನಾಡಿ ದರು. ಎನ್.ಎಸ್. ಪಾಟೀಲ ದೇವದಾಸಿ ಪದ್ಧತಿಯ ನಿರ್ಮೂಲನೆ ವಿಷಯ ಕುರಿತು ಉಪನ್ಯಾಸ ನೀಡಿದರು.ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಕೆ. ಕಲ್ಲೂರ, ವಕೀಲರಾದ ಎಂ.ಎನ್. ಬಿಸ್ಟಗೊಂಡ, ಪಿ.ಬಿ. ಹೊಸಮನಿ ವೇದಿಕೆ ಯಲ್ಲಿ ಉಪಸ್ಥಿತ ರಿದ್ದರು. ಸಾಬವ್ವ ಮಾದರ ಪ್ರಾರ್ಥನಾ ಗೀತೆ ಹಾಡಿ ದರು. ಅಶೋಕ ಮೂರಮಾನ ಸ್ವಾಗತಿಸಿದರು. ಪರಶುರಾಮ ದೊಡಮನಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)