ಸೋಮವಾರ, ಆಗಸ್ಟ್ 26, 2019
21 °C

ಏತ ನೀರಾವರಿಗೆ ಆದ್ಯತೆ: ಶಾಸಕ

Published:
Updated:

ಹುಣಸಗಿ: ಕ್ಷೇತ್ರದ ಜನತೆಯ ಬಹು ನಿರೀಕ್ಷಿತ ಯೋಜನೆಯಾದ ಶ್ರೀನಿವಾಸಪುರ, ಗುಂಡಲಗೇರಾ, ಭಪ್ಪರಗಿ ಏತ ನೀರಾವರಿಗಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಸರ್ಕಾರ ಮಟ್ಟದಲ್ಲಿ ಪ್ರಯತ್ನ ನಡೆದಿದೆ.  ಇದರಿಂದಾಗಿ ನೀರಾವರಿ ಇಲ್ಲದ ಗ್ರಾಮಗಳಿಗೆ ಕೃಷಿ ಭೂಮಿಗೆ ನೀರಿನ ಅನುಕೂಲವಾಗಲಿದೆ ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಹುಣಸಗಿ ಪಟ್ಟಣದಲ್ಲಿ ಮಹಿಳಾ ಶೌಚಾಲಯದ ಸಮಸ್ಯೆ ಇದ್ದು, ಅವಶ್ಯವಿರುವ ಭಾಗದಲ್ಲಿ ಒಂದು ಶೌಚಾಲಯ ನೀಡಲಾಗಿದೆ.

ಅಲ್ಲದೇ ಸಿಸಿ ರಸ್ತೆ ಇಲ್ಲದ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.ಹುಣಸಗಿ ಬಸ್ ಡಿಪೋ ನಿರ್ಮಾಣಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ನಿಗದಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಮುಖಂಡರಾದ ವಿಠ್ಠಲ ಯಾದವ್, ಶಿವಣ್ಣ ಮಂಗಿಹಾಳ್, ಸೂಲಪ್ಪ ಕಮತಗಿ, ಮಹಾದೇವಪ್ಪ ಬಳಿ, ಸಿದ್ದಣ್ಣ ಮಲಗಲದಿನ್ನಿ, ನಾನಾಗೌಡ ಪಾಟೀಲ್, ಗಾಮ್ರ ಪಂಚಾಯಿತಿ ಅಧ್ಯಕ್ಷ ಸುರೇಶ ನೀರಲಗಿ, ಮಡಿವಾಳಪ್ಪ ಮಿಲಟ್ರಿ, ಬಸವರಾಜ ಸಜ್ಜನ್, ಲಿಯಾಖತ್ ಅಲಿ ಮೇಸ್ತ್ರಿ, ಬಾಬು ಚೌಧರಿ, ಸೂಗಪ್ಪ ಚಂದಾ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಮುಖಂಡರು ಇದ್ದರು.

Post Comments (+)