ಮಂಗಳವಾರ, ಮೇ 11, 2021
27 °C

ಏತ ನೀರಾವರಿಗೆ ಶೀಘ್ರ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ತಾಲ್ಲೂಕಿನ ಮಹತ್ವಾಕಾಂಕ್ಷಿ ಯೋಜನೆಯಾದ ಗರಕಹಳ್ಳಿ ಏತನೀರಾವರಿ ಯೋಜನೆಗೆ ಪಿತೃಪಕ್ಷದ ಬಳಿಕ ಮೋಕ್ಷ ದೊರಕಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ. ಯೋಗೀಶ್ವರ್ ಸ್ಪಷ್ಟಪಡಿಸಿದರು.ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಪಿಡಬ್ಲ್ಯುಡಿ ಇಲಾಖೆ ವತಿಯಿಂದ ಗ್ರಾಮ ಪರಿಮಿತಿಯಲ್ಲಿ ರಸ್ತೆ  ಕಾಂಕ್ರೀಟೀಕರಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಈ ಯೋಜನೆ ಭಾಗಶಃ ಪೂರ್ಣಗೊಂಡಿದ್ದು ಗರಕಹಳ್ಳಿ ಮತ್ತು ನೇರಲೂರು ಕೆರೆಗೆ ನೀರು ಬಿಡಲಾಗುವುದೆಂದು ತಿಳಿಸಿದರು. ತಾಲ್ಲೂಕಿನನಾದ್ಯಂತ ನೀರಾವರಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹೊಸ ನೀರಾವರಿ ಯೋಜನೆಯನ್ನು ಸಿದ್ದಪಡಿಸಿದ್ದು ಮಾರ್ಕೋಮಡನಹಳ್ಳಿಯಿಂದ ಕಣ್ವನದಿಗೆ ನೀರು ತರುವ ಯೋಜನೆ ಸಿದ್ದ ಪಡಿಸಿರುವುದಾಗಿ ಸಚಿವರು ಭರವಸೆ ನೀಡಿದರು.

 

ಈ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು ಅವರು ಸಮ್ಮತಿಸಿದ್ದಾರೆ. 200ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಿದ್ದು, ಕಣ್ವ ಜಲಾಶಯದಿಂದ ನೇರವಾಗಿ ನೀರು ಪೂರೈಕೆ ಮಾಡಲು ಸಾಧ್ಯವಿರುವ ಗ್ರಾಮಗಳಿಗೆ ನೇರವಾಗಿ ನೀರು ಪೂರೈಕೆ ಮಾಡಲಾಗುವುದು. ನೇರ ಸಂಪರ್ಕ ಇಲ್ಲದ ಗ್ರಾಮಗಳಿಗೆ ಕೊಳವೆ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದರು.ಉಪಚುನಾವಣೆಯ ಸಮಯದಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ ಸಚಿವರು ನ್ಯಾಯಾಲಯ ಕಟ್ಟಡ, ಅಂಬೇಡ್ಕರ್ ಭವನದ ಕಾಮಗಾರಿಗಳು ಭರದಿಂದ ಸಾಗಿವೆ. ಇಂದಿನಿಂದ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ  ಚಾಲನೆ ದೊರತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಇಗ್ಗಲೂರು ಬಸವರಾಜು, ವೈಟಿಹಳ್ಳಿ ಬಸವರಾಜು, ಅಕ್ಕೂರು ಶೇಖರ್, ಗುರುರಾಜ್ ಕಾಲಿಕೆರೆ ಗುರುರಾಜ್ ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.