ಏನಾಗಿದೆ ಇವರಿಗೆ?

7

ಏನಾಗಿದೆ ಇವರಿಗೆ?

Published:
Updated:

ಮಂಗಳೂರಿನಲ್ಲಿ ಜಾನ್ ಅಬ್ರಹಾಂ ಎಂಬ `ನಟ~ನಿಗೆ ಮುತ್ತಿಟ್ಟು ಪೆಟ್ಟು ತಿಂದ ಕಾಲೇಜು ತರುಣಿಗೆ ಈ ಹಿಂದೆ ಹೀಗೆ ಮಾಡಿ ಹೆಸರುಗಳಿಸಿದವರ ಮಾದರಿ ಎದುರಿಗೆ ಇದ್ದಿರಬೇಕು. ಇದೆಂತಹ ತಪ್ಪು ಮಾದರಿ ಎಂಬುದು ಇನ್ನಾದರೂ ಹುಡುಗಿಯರಿಗೆ ಅರ್ಥವಾಗಬೇಕು. ಅಷ್ಟರಮಟ್ಟಿನ `ಪಾಠ~ವನ್ನು ಜಾನ್ ಕಲಿಸಿದ್ದು ಒಳ್ಳೆಯದೇ ಆಯಿತು.ಏನಾಗಿದೆ ನಮ್ಮ ಯುವಜನರಿಗೆ? ಚಿತ್ರದಲ್ಲಿ ಕಂಡ ನಟ ಊರಿಗೆ ಬಂದಾಗ ದುಂಬಾಲು ಬಿದ್ದು ನೋಡುವುದಕ್ಕೇನಿದೆ? ಆತನೂ ಒಬ್ಬ ಮನುಷ್ಯ? ಜಾನ್‌ನನ್ನು ಕಾಣಲು ತಮ್ಮ ಕೆಲಸ ಮತ್ತು ಕಲಿಕೆಯನ್ನು ಬಿಟ್ಟು ಕಾಯುವುದಕ್ಕೆ ಮನಸ್ಸಾದರೂ ಹೇಗೆ ಬಂತು? ಜವಾಬ್ದಾರಿಯುಳ್ಳ ಯುವಜನರಿಗೆ ಇದಕ್ಕೆ ಸಮಯ ಸಿಕ್ಕೀತೆ? ಸಿಕ್ಕಿದೆಯೆಂದಾದರೆ ಇವರಿಗೆ ಜವಾಬ್ದಾರಿ ಇದೆಯೇ? ತಾವು ಸಿನೆಮಾ ಹುಚ್ಚರು, ನಟನ ಅಭಿಮಾನಿಗಳೆಂಬ ಹುಚ್ಚರು, ಇದು ಒಂದು ಬದುಕಿನ ಸಾರ್ಥಕ್ಯದ ಕ್ಷಣ ಎಂದೆಲ್ಲ ತೋರಿಸಿಕೊಳ್ಳುವ ಚಟವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry