ಮಂಗಳವಾರ, ಸೆಪ್ಟೆಂಬರ್ 22, 2020
26 °C

ಏನು ಮಾಡ್ಲಿ ಸ್ವಾಮಿ ನಾನೀಗ ನಾಯಿ ಪ್ರೇಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏನು ಮಾಡ್ಲಿ ಸ್ವಾಮಿ ನಾನೀಗ ನಾಯಿ ಪ್ರೇಮಿ

ಮನೆಯಲ್ಲಿ ಸಾಕಿದ ಪ್ರಾಣಿಯ ಚಲನವಲನ ನೋಡಿ ಖುಷಿ ಪಡುವ ಪ್ರಾಣಿ ಪ್ರಿಯರಿಗೆ ಭಾನುವಾರ ಜಗದಗಲ ಹರುಷ. ಅದರಲ್ಲೂ ಮಾತು ಕೇಳುವ ತಮ್ಮ ನಾಯಿಯ ಸಾಮರ್ಥ್ಯ ಪ್ರದರ್ಶಿಸುವ ಆಟಗಳು, ಉತ್ಸಾಹ ಕಂಡು ಎಲ್ಲರೂ ಬೆರಗಾದವರೇ.ಮನೆಮಗಳ ಸ್ಥಾನದಲ್ಲಿದ್ದ ನಾಯಿಗಳು ಫ್ಯಾಷನ್ ಶೋಗಾಗಿ ಭರ್ಜರಿ ತಯಾರಿ ನಡೆಸಿದ್ದವು. ಶರ್ಟ್, ಟೈ ಸೇರಿದಂತೆ ವಿಧವಿಧದ ಡ್ರೆಸ್ ತೊಟ್ಟು ಕಂಗೊಳಿಸುತ್ತಿದ್ದವು. ಸ್ಪರ್ಧೆಗೆ ಬಂದ ಓರಗೆಯವರ ಸ್ನೇಹ ಬೆಳೆಸಲು ನಾಯಿಗಳು ಮುಂದಾಗುತ್ತಿದ್ದರೂ ಅಲ್ಲಿ ಜಮಾಯಿಸಿದ್ದ ಹುಡುಗಿಯರು ನಾಯಿಗಳಿಗೆ ಪ್ರೀತಿಯ ಮಳೆ ಸುರಿಸುವುದರಲ್ಲಿ ತಲ್ಲೆನರಾಗಿದ್ದರು.

 

ಮುದ್ದು ನಾಯಿಗಳ ಪುಂಡಾಟ ನೋಡಿ ಬೆರಗಾಗಿದ್ದ ಮಕ್ಕಳು ಅವುಗಳಿಗೆ ನೀರು ಕುಡಿಸುವುದು, ಬಿಸ್ಕಿಟ್ ತಿನ್ನಿಸುವುದರಲ್ಲಿ ಬ್ಯುಸಿಯಾಗಿದ್ದರು. ಇನ್ನೊಂದು ಪುಟಾಣಿ ನಾಯಿ ತನಗ್ಯಾರ ಉಸಾಬರಿಯೂ ಬೇಡ ಎಂಬಂತೆ ತನ್ನೊಡತಿಯ ಭುಜಕ್ಕೆ ಬೆಚ್ಚಗೆ ಒರಗಿಕೊಂಡಿತ್ತು.ನಾಯಿಗಳ ತುಂಟಾಟ, ಅವು ತೋರುವ ಪ್ರೀತಿ, ಹೇಳಿದಂತೆ ಮಾಡುವ ಅವುಗಳ ವಿಧೇಯತೆ ಕಂಡಾಗ ನಾಯಿ ಕಂಡರಾಗದವರೂ ಒಮ್ಮೆ `ಏನು ಮಾಡ್ಲಿ ಸ್ವಾಮಿ ನಾನೀಗ ನಾಯಿ ಪ್ರೇಮಿ~ ಎಂದು ಉಲ್ಲಾಸಭರಿತರಾಗಿ ಹೇಳೇ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.