ಶುಕ್ರವಾರ, ಜೂನ್ 18, 2021
24 °C

ಏನು ಹುಚ್ಚೂರೀ, ಯಾಕ್ಹಿಂಗಾಡ್ತೀರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಕರ್ಮಿ ಪ್ರಸನ್ನ ನಿರ್ದೇಶಿಸಿರುವ ಏನು ಹುಚ್ಚೂರೀ, ಯಾಕ್ಹಿಂಗಾಡ್ತೀರಿ ನಾಟಕ ಭಾನುವಾರ ಪ್ರದರ್ಶನಗೊಳ್ಳಲಿದೆ.ನಾಟಕದ ಬಗ್ಗೆ...

ಈ ನಾಟಕವನ್ನು ರಚಿಸುವಲ್ಲಿ ಮೋಲಿಯರ್‌ನ ಉದ್ದೇಶ ಸರಳವಿದೆ. ಹದಿನೇಳನೆಯ ಶತಮಾನದಲ್ಲಿ ಯೂರೋಪಿನಲ್ಲಿ ಪ್ರಬಲವಾಗತೊಡಗಿದ್ದ ಬೂರ್ಜ್ವಾ ವರ್ಗವನ್ನು ವಿಡಂಬನೆ ಮಾಡುವುದು. ಯಾರಿವರು ಬೂರ್ಜ್ವಾಗಳೆಂದರೆ? ವ್ಯಾಪಾರಸ್ಥರು, ದಲ್ಲಾಳಿಗಳು, ನೌಕರಶಾಹಿಗಳು ಹಾಗೂ ಮಧ್ಯವರ್ತಿಗಳು.

 

ಇವರು ನಮ್ಮಲ್ಲೂ ಇದ್ದಾರೆ, ಮಾತ್ರವಲ್ಲ, ಇತ್ತೀಚಿಗೆ ವಿಪರೀತ ಬೆಳೆದಿದ್ದಾರೆ. ಸಂಖ್ಯೆಯಲ್ಲಿ ಬೆಳೆದಿದ್ದಾರೆ, ಶಕ್ತಿಯಲ್ಲೂ ಬೆಳೆದಿದ್ದಾರೆ. ಇತ್ತೀಚೆಗೆ ಪತ್ರಿಕೆಗಳಲ್ಲಿ ಬೆಳಕಿಗೆ ಬರುತ್ತಿರುವ ಎಲ್ಲ ರೀತಿಯ ಅವ್ಯವಹಾರಗಳು, ಭ್ರಷ್ಟಾಚಾರಗಳು ಹಾಗೂ ವಂಚನೆ ಪ್ರಕರಣಗಳ ಪ್ರಮುಖ ಪಾತ್ರಧಾರಿಗಳು ಇವರು; ಗಣಿಧಣಿಗಳು, ಕಂಟ್ರಾಕ್ಟರುಗಳು, ರಾಜಕೀಯ ವ್ಯಕ್ತಿಗಳು, ಎಂಜಿನಿಯರು ಡಾಕ್ಟರು ಇತ್ಯಾದಿ.ಇತ್ತ ಸಂಸ್ಕೃತಿಯೂ ಬದಲಾಗಿದೆ; ಸಂಸ್ಕೃತಿ ಎಡಬಿಡಂಗಿಯಾಗಿದೆ, ಭಾಷೆ ಎಡಬಿಡಂಗಿಯಾಗಿದೆ, ವೇಷ ಎಡಬಿಡಂಗಿಯಾಗಿದೆ, ವ್ಯವಹಾರ ಎಡಬಿಡಂಗಿಯಾಗಿದೆ. ಈ ಬೂರ್ಜ್ವಾಗಳಿಗೆ ಅರಿವಿನ ಗಂಭೀರ ಕೊರತೆಯಿದೆ; ತಾವು ಲಂಚ ನೀಡುತ್ತಿರುವ ಅರಿವಿಲ್ಲ ಇವರಿಗೆ ಅಥವಾ ಲಂಚ ಪಡೆಯುತ್ತಿರುವ ಅರಿವೂ ಇಲ್ಲ.

 

ಇತರರಿಗೆ ತಾವು ಅಗೌರವ ತೋರಿಸುತ್ತಿರುವುದು, ನೋವುಂಟುಮಾಡುತ್ತಿರುವುದು ಯಾವುದೂ ಇವರಿಗೆ ಅರಿವಿರುವುದಿಲ್ಲ. ಯಂತ್ರಗಳು ಇವರ ಆಯುಧಗಳು, ದುಡ್ಡು ಇವರ ಶಕ್ತಿ. ಅಗತ್ಯಕ್ಕಿಂತ ಹೆಚ್ಚಿನ ಹಣವು ಇವರಲ್ಲಿ ಶೇಖರಣೆಯಾಗಿದೆ.ಈ ಜಂಟಲ್‌ಮನ್‌ಗಳಂತೆ ವ್ಯವಹರಿಸುವ ಬೂರ್ಜ್ವಾಗಳೇ ಮೋಲಿಯರ್‌ನ ಈ ನಾಟಕಕ್ಕೆ ವಸ್ತುವಾಗಿದೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಸಂಜೆ 7 ಗಂಟೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.