ಭಾನುವಾರ, ಏಪ್ರಿಲ್ 18, 2021
29 °C

ಏನೋ ಒಂಥರಾ ಅನಿಸುವ ಉಡುಗೆ ನಂಗಿಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏನೋ ಒಂಥರಾ ಅನಿಸುವ ಉಡುಗೆ ನಂಗಿಷ್ಟ

ಬಾಗು ಬಳುಕುಗಳುಳ್ಳ ಭಾರತೀಯ ಸ್ತ್ರೀಯರು ಅಂದ್ರೆ ನಂಗಿಷ್ಟ ಅನ್ನುತ್ತಿದ್ದಾರೆ ವಿದ್ಯಾ ಬಾಲನ್.ನಟೀಮಣಿಯರೆಲ್ಲರೂ ಸೈಜ್ ಝೀರೊ ಬಗ್ಗೆ ಮಾತಾಡುವುದನ್ನೇ ಒಂದು ಗೀಳಾಗಿಸಿಕೊಂಡಿದ್ದಾರೆ. ಆದರೆ, ವಿದ್ಯಾ `ದಿ ಡರ್ಟಿ ಪಿಕ್ಚರ್~ ಸಿನಿಮಾದಲ್ಲಿ ತಮ್ಮ ದೇಹಾಕಾರವನ್ನು ಯಾವುದೇ ಮುಜುಗರವಿಲ್ಲದೇ ತೋರಿಸುತ್ತಾ, ಸೈಜ್ ಝೀರೋ ಫಿಗರ್ ತಾವೇ ಚೆಂದ ಎಂಬುದನ್ನು ತೋರಿಸಿಕೊಟ್ಟಿದ್ದಾರೆಂಬ ಪ್ರತಿಕ್ರಿಯೆಗಳು ಬಂದಿದ್ದವು.`ನನ್ನ ಪ್ರಕಾರ ಝೀರೊ ಅಂದ್ರೆ, ದೇಹದಲ್ಲಿ ಕೊಬ್ಬು ಸೊನ್ನೆಯಾಗಿರಬೇಕು, ಅಷ್ಟೆ. ಅದು ಬಿಟ್ಟು ಸೊಂಟವನ್ನು ಸೈಜ್ ಝೀರೊ ಮಾಡುವುದರ ಬಗ್ಗೆ ಮಾತನಾಡುವುದು ತರವಲ್ಲ. ನಾನು ಬಳುಕುವ ಲತೆಯಂತಿರುವ ಭಾರತೀಯ ನಾರಿಯರನ್ನು ತುಂಬಾ ಇಷ್ಟಪಡುತ್ತೇನೆ.ನಾನು ಕೂಡ ಹಾಗೆಯೇ ಇದ್ದೇನೆ. ಸಾಂಪ್ರದಾಯಿಕ ಹಾಗೂ ಮಾಡರ್ನ್ ಎರಡರ ಸಮ್ಮಿಶ್ರಣ ಇರುವ, ಹಿತಮಿತವಾಗಿ ಮೈದೋರುವ, ನೋಡುಗರ ಎದೆಯಲ್ಲಿ ಹಿತವಾದ ಕಂಪನ ಹುಟ್ಟಿಸುವ ವಸ್ತ್ರಗಳೆಂದರೆ ನಂಗಿಷ್ಟ. ನನ್ನ ಬಳಿ ಸಾಕಷ್ಟು ಸೀರೆಗಳಿವೆ. ಸೀರೆ ಉಡುವುದರಲ್ಲಿ ಏನೋ ಹಿತವಿದೆ~ ಎನ್ನುವ ವಿದ್ಯಾಗೆ ಬೆನ್ನು ತೋರುವ ರವಿಕೆ ತೊಡುವುದೆಂದರೆ ತುಂಬಾ ಇಷ್ಟವಂತೆ.33 ವರ್ಷದ ವಿದ್ಯಾ ಈ ವಿಷಯವನ್ನು ಹೇಳಿಕೊಂಡಿದ್ದು ಆಲಿವಾ ಬ್ರ್ಯಾಂಡ್ ಹೊರತಂದಿರುವ ಹೊಸ ಸ್ನಾಕ್ಸ್ ಬಿಡುಗಡೆ ಸಮಾರಂಭದಲ್ಲಿ. ಆವತ್ತು ಅವರು ಗಾಢವರ್ಣದ ಪಿಂಕ್ ಸೀರೆ ಉಟ್ಟಿದ್ದು, ಬೆನ್ನು ತೋರುವ ರವಿಕೆ ತೊಟ್ಟು ಅಂದವಾಗಿ, ಮಾದಕವಾಗಿ ಕಾಣಿಸುತ್ತಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.