ಏಪ್ರಿಲ್‌ನಲ್ಲಿ ಭೀಮಾತೀರದಲ್ಲಿ ಚಿತ್ರ ತೆರೆಗೆ

7

ಏಪ್ರಿಲ್‌ನಲ್ಲಿ ಭೀಮಾತೀರದಲ್ಲಿ ಚಿತ್ರ ತೆರೆಗೆ

Published:
Updated:

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಈಗ ಕನ್ನಡ, ಹಿಂದಿ ಮತ್ತು ತೆಲಗು ಚಲನಚಿತ್ರಗಳ ಚಿತ್ರೀಕರಣಕ್ಕೆ ನೆಚ್ಚಿನ ಸ್ಥಾನವಾಗಿದೆ. ಹಿಂದಿ, ಕನ್ನಡ ಹಾಗೂ  ತೆಲಗು ಚಿತ್ರಗಳ ಚಿತ್ರೀಕರಣ ನಡೆಯುತ್ತಿವೆ.ದುನಿಯಾ ವಿಜಯ್ ನಟಿಸುತ್ತಿರುವ ಓಂಪ್ರಕಾಶ ನಿರ್ದೇಶನದ `ಭೀಮಾ ತೀರದಲ್ಲಿ~ ಚಿತ್ರದ ಚಿತ್ರೀಕರಣ ಮಾಡ ಲಾಗಿತ್ತು. ಶುಕ್ರವಾರ ಚಿತ್ರದ ಕೊನೆಯ ಭಾಗದ ಚಿತ್ರೀಕರಣವು ಬಾಗಲಕೋಟೆ ಸಮೀಪದ  ಮುಚಖಂಡಿ ವೀರ ಭದ್ರೇಶ್ವರ ದೇವಸ್ಥಾನದಲ್ಲಿ ನಡೆಯಿತು.ಏಪ್ರಿಲ್ 2ನೇ ವಾರದಲ್ಲಿ `ಭೀಮಾತೀರದಲ್ಲಿ~   ಚಲನಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಓಂಪ್ರಕಾಶ ತಿಳಿಸಿದರು.`ಭೀಮಾತೀರದಲ್ಲಿ~ ಕೊನೆಯ ಹಂತದ ಚಿತ್ರೀಕರಣ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲ ಚಿತ್ರೀಕರಣದ ಕಾರ್ಯ ಅಂತಿಮ ಹಂತದಲ್ಲಿದೆ.   ಏಪ್ರಿಲ್ 2ನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.ಬಾಗಲಕೋಟೆ, ಬಾದಾಮಿ, ಕೂಡಲಸಂಗಮ, ವಿಜಾಪುರ, ಮುಚ ಖಂಡಿ ಹಾಗೂ ಸುತ್ತಮುತ್ತಲ ಪ್ರದೇಶ ದಲ್ಲಿ ಚಿತ್ರೀಕರಣ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ಬಾಗಲಕೋಟೆ ನಗರದ ಕೆರೂಡಿ ಆಸ್ಪತ್ರೆ ಮಾರ್ಗದಲ್ಲಿ ಕೆಲವು ದೃಶ್ಯ, ನಂತರ ಮಧ್ಯಾಹ್ನ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ವೊಂದರ ದಶ್ಯವನ್ನು ಚಿತ್ರೀಕರಿಸ ಲಾಯಿತು.ದುನಿಯಾ ವಿಜಯ್ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಚಿತ್ರೀಕರ ಣಕ್ಕಾಗಿ ಆಗಮಿಸಿದಾಗ ಅಭಿಮಾನಿ ಗಳು, ಮುಗಿಬಿದಿದ್ದರು. ದುನಿಯಾ ವಿಜಯ್‌ನ ಹಸ್ತಲಾಘವ ಮಾಡಿ ಅಭಿಮಾನಿಗಳು ಸಂತೋಷ ಪಟ್ಟರು.    ತೆಲಗು ನಟ ನಾಗಾರ್ಜುನ  ಶಿರಡಿ ಸಾಯಿ ತೆಲಗು ಚಿತ್ರದ ಚಿತ್ರೀಕರಣ ಸಹ ಬಾದಾಮಿ ಸುತ್ತಮುತ್ತಲಿನ ಪ್ರದೇಶ ದಲ್ಲಿ  ಬುಧುವಾರ ನಡೆಯಿತು.  ಖ್ಯಾತ ಹಿಂದಿ ಚಲನಚಿತ್ರ ನಟ ಅಕ್ಷಯ ಕುಮಾರ ಅಭಿನಯದ  ರೌಡಿ ರಾಥೋಡ್  ಚಿತ್ರದ ಚಿತ್ರೀಕರಣ ಬಾದಾಮಿಯಲ್ಲಿ ಭರದಿಂದ ಸಾಗಿದೆ.ಕೆಲವು ವರ್ಷಗಳ ಹಿಂದೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅಭಿಯನದ  ಗುರು  ಸಹ ಇಲ್ಲೇ ಚಿತ್ರೀಕರಣಗೊಂಡಿತ್ತು.   ನೆಚ್ಚಿನ ತಾರೆಯರನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry