ಏಪ್ರಿಲ್ ಅಂತ್ಯದಲ್ಲಿ ಎನ್‌ಟಿಪಿಗೆ ಒಪ್ಪಿಗೆ

7

ಏಪ್ರಿಲ್ ಅಂತ್ಯದಲ್ಲಿ ಎನ್‌ಟಿಪಿಗೆ ಒಪ್ಪಿಗೆ

Published:
Updated:

ನವದೆಹಲಿ (ಪಿಟಿಐ):ಟೆಲಿಕಾಂ ಇಲಾಖೆ ಸಿದ್ಧಪಡಿಸಿರುವ ನೂತನ ದೂರಸಂಪರ್ಕ ನೀತಿ 2011ಕ್ಕೆ (ಎನ್‌ಟಿಪಿ) ಏಪ್ರಿಲ್ ಅಂತ್ಯದ ವೇಳೆಗೆ ಮಂಜೂರಾತಿ ದೊರಕಲಿದೆ. ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದ ದೂರಸಂಪರ್ಕ ನೀತಿಯ ಸಂಪುಟ ಟಿಪ್ಪಣಿಯನ್ನು ಸಂಬಂಧಪಟ್ಟ ಸಚಿವರಿಗೆ ಮಂಗಳವಾರ ನೀಡಲಾಗುವುದು ಮತ್ತು ಈ ಸಚಿವರು ಮಾರ್ಚ್ 6ರ ಒಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಲಾಗಿದೆ.ಹೊಸ ನೀತಿಯ ಮೇಲಿನ ಟಿಪ್ಪಣಿ ಬಗ್ಗೆ ಮಾರ್ಚ್ 21ರಂದು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಏಪ್ರಿಲ್ ಅಂತ್ಯದ ವೇಳೆಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳು ಇವೆ.ಉದ್ದೇಶಿತ ಹೊಸ ನೀತಿಯಲ್ಲಿ ನಿರ್ವಾಹಕರು ಮುಂಬೈ ಮತ್ತು ದೆಹಲಿ ಹೊರತುಪಡಿಸಿ ಗರಿಷ್ಠ 8 ಎಂಎಚ್‌ಝಡ್ ತರಂಗಾಂತರವನ್ನು ಪಡೆಯಲು ಅವಕಾಶವಿದೆ.ಮುಂಬೈ ಮತ್ತು ದೆಹಲಿಯಲ್ಲಿ ಗರಿಷ್ಠ 10 ಎಂಎಚ್‌ಝಡ್ ತರಂಗಾಂತರವನ್ನು ಪಡೆಯಲು ಅವಕಾಶವಿದೆ.

ಕಂಪೆನಿಗಳ ವಿಲೀನ ಮತ್ತು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಹೊಸ ನೀತಿಯಲ್ಲಿ ಸರಳಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry