ಶನಿವಾರ, ಜನವರಿ 25, 2020
19 °C

ಏಪ್ರಿಲ್ ನಂತರ ಬಡ್ಡಿ ದರ ಇಳಿಕೆ: ಫಿಕ್ಕಿ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಏಪ್ರಿಲ್ ತಿಂಗಳ ನಂತರ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು. ವರ್ಷಾಂತ್ಯಕ್ಕೆ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 7ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆ ಇದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಸಮೀಕ್ಷೆ ತಿಳಿಸಿದೆ.ಹಣದುಬ್ಬರ ತಗ್ಗಿದರೂ, `ಆರ್‌ಬಿಐ~ ಕೂಡಲೇ ಬಡ್ಡಿ ದರ ಇಳಿಕೆಗೆ ಮುಂದಾಗುವ ಸಾಧ್ಯತೆ ಕಡಿಮೆ ಎಂದು   ಸಮೀಕ್ಷೆಯಲ್ಲಿ ಭಾಗವಹಿಸಿದ ಕಂಪೆನಿಗಳು ಅಭಿಪ್ರಾಯಪಟ್ಟಿವೆ ಎಂದು `ಫಿಕ್ಕಿ~ ಬಿಡುಗಡೆ ಮಾಡಿರುವ ಆರ್ಥಿಕ ಮುನ್ನೋಟ~ ವರದಿಯಲ್ಲಿ ತಿಳಿಸಲಾಗಿದೆ.ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 33ರಷ್ಟು ಕಂಪೆನಿಗಳು ಶೇ 6.5ರಷ್ಟು `ಜಿಡಿಪಿ~ ನಿರೀಕ್ಷಿಸಿದರೆ ಶೇ 67ರಷ್ಟು ಕಂಪೆನಿಗಳು ವೃದ್ಧಿ ದರ ಶೇ 7 ಅನ್ನು ತಲುಪಬಹುದು ಎಂದಿವೆ. ಆದರೆ, ಯಾವುದೇ ಕಂಪೆನಿ `ಜಿಡಿಪಿ~ ಶೇ 7.5 ಅನ್ನು ದಾಟಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿಲ್ಲ. ಕಳೆದ ಡಿಸೆಂಬರ್ ತಿಂಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಬ್ಯಾಂಕಿಂಗ್, ಹಣಕಾಸು ಸೇವೆ, ತಯಾರಿಕೆ ವಲಯಗಳಲ್ಲಿನ ಕಂಪೆನಿಗಳು ಭಾಗವಹಿಸಿದ್ದವು.

ಪ್ರತಿಕ್ರಿಯಿಸಿ (+)