ಭಾನುವಾರ, ನವೆಂಬರ್ 17, 2019
21 °C

ಏಪ್ರಿಲ್ 17ಕ್ಕೆ ಥ್ಯಾಚರ್ ಅಂತ್ಯಕ್ರಿಯೆ

Published:
Updated:
ಏಪ್ರಿಲ್ 17ಕ್ಕೆ ಥ್ಯಾಚರ್ ಅಂತ್ಯಕ್ರಿಯೆ

ಲಂಡನ್ (ಪಿಟಿಐ): ಸೋಮವಾರ ನಿಧನ ಹೊಂದಿದ ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅಂತ್ಯಕ್ರಿಯೆ ಏಪ್ರಿಲ್ 17ರಂದು ಸೇಂಟ್ ಪೌಲ್‌ನ ಕ್ಯಾಥೆಡ್ರಲ್‌ನಲ್ಲಿ ನಡೆಯಲಿದೆ.ರಾಣಿ 2ನೇ ಎಲಿಜಬೆತ್ ಅವರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿವೆ.ಸರ್ಕಾರಿ ಗೌರವಗಳಿಲ್ಲ:  ಸಕಲ ಸರ್ಕಾರಿ ಗೌರವಗೊಳೊಂದಿಗೆ ಅಂತ್ಯ ಸಂಸ್ಕಾರ ನಡೆಸುವುದನ್ನು ಸ್ವತಃ ಥ್ಯಾಚರ್ ಬಯಸಿರಲಿಲ್ಲ. ಅದು ತಮಗೆ ಹೊಂದುವುದಿಲ್ಲ ಎಂದೂ ಅವರು ಹೇಳಿದ್ದರು. ಹಾಗಾಗಿ ಅಂತ್ಯಸಂಸ್ಕಾರವನ್ನು ಅವರ ಆಶಯದಂತೆಯೇ ನೆರವೇರಿಸಲಾಗುವುದು ಎಂದು ಥ್ಯಾಚರ್  ಗೆಳೆಯ ಹಾಗೂ ವಕ್ತಾರ ಲಾರ್ಡ್ ಟಿಮ್ ಬೆಲ್ ಹೇಳಿದ್ದಾರೆ.ಸಂಸತ್ತಿನಲ್ಲಿ ಶ್ರದ್ಧಾಂಜಲಿ: ಥ್ಯಾಚರ್ ನಿಧನದ ಹಿನ್ನೆಲೆಯಲ್ಲಿ ಬ್ರಿಟನ್ ಸಂಸತ್ತಿನ ಎರಡೂ ಸದನಗಳು ಮಂಗಳವಾರ ತುರ್ತು ಅಧಿವೇಶನ ಸೇರಿ, ಅಗಲಿದ ನಾಯಕಿಗೆ ಶ್ರದ್ಧಾಂಜಲಿ ಸಲ್ಲಿಸಿದವು.

ಪ್ರತಿಕ್ರಿಯಿಸಿ (+)