ಮಂಗಳವಾರ, ಜೂನ್ 15, 2021
23 °C

ಏರಲಿವೆ ವಾಹನ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  2012-13ನೇ ಸಾಲಿನ ಬಜೆಟ್‌ನಲ್ಲಿ ಎಲ್ಲಾ ಉತ್ಪನ್ನಗಳ ಮೇಲಿನ ಉತ್ಪಾದನಾ ತೆರಿಗೆಗಳನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರಮುಖ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಮಹೀಂದ್ರಾ ಆಂಡ್ ಮಹೀಂದ್ರಾ ಮತ್ತು ಹೋಂಡಾ ಸಂಸ್ಥೆಗಳು ತಮ್ಮ ವಾಹನಗಳ ಬೆಲೆಗಳನ್ನು ರೂ.70,000 ದವರೆಗೆ ಹೆಚ್ಚಿಸಲಿವೆ.

`ನಮ್ಮ ಉತ್ಪನ್ನಗಳ ಬೆಲೆಗಳನ್ನು ನಾವು  ಹೆಚ್ಚಿಸಲಿದ್ದು,  ಹೆಚ್ಚುವರಿ ಉತ್ಪಾದನಾ ತೆರಿಗೆಗಳನ್ನು ಗ್ರಾಹಕರಿಗೆ ವರ್ಗಾಯಿಸಲಿದ್ದೇವೆ. ಬೆಲೆಯಲ್ಲಿ ಎಷ್ಟು ಏರಿಕೆ ಮಾಡಬಹುದು ಎಂಬುದನ್ನು ಈಗ ಪರಿಶೀಲಿಸುತ್ತಿದ್ದೇವೆ~ ಎಂದು ಮಾರುತಿ ಸುಜುಕಿಯ ಭಾರತೀಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಆಡಳಿತ ಕಾರ್ಯನಿರ್ವಹಣಾಧಿಕಾರಿ ಮಯಾಂಕ್ ಪಾರೀಕ್ ಹೇಳಿದ್ದಾರೆ.

ದೇಶದ ಮತ್ತೊಂದು ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಹೀಂದ್ರಾ ಆಂಡ್ ಮಹೀಂದ್ರಾ ಕೂಡ ತನ್ನ ಎಲ್ಲಾ ವಾಹನಗಳ ಬೆಲೆಗಳನ್ನು ಏರಿಸುವುದಾಗಿ ಹೇಳಿದೆ.

ವಾಹನ ಉದ್ದಿಮೆಯು ಹೆಚ್ಚುವರಿ ಉತ್ಪಾದನಾ ತೆರಿಗೆಯನ್ನು ತನ್ನ ಗ್ರಾಹಕರಿಗೆ ವರ್ಗಾಯಿಸಲಿದೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾದ ಆಟೊಮೋಟಿವ್ ಮತ್ತು ಕೃಷಿ ಯಂತ್ರೋಪಕರಣಗಳ ವಿಭಾಗದ ಅಧ್ಯಕ್ಷ ಪವನ್ ಗೋಯೆಂಕಾ ಹೇಳಿದ್ದಾರೆ.

ನಮ್ಮ ವಾಹನಗಳ ಬೆಲೆಗಳನ್ನು ಶೇ 3ರಿಂದ 3ರಷ್ಟು ಅಂದರೆ 5,000 ದಿಂದ 30,000 ರೂಪಾಯಿಗಳವರೆಗೆ ಹೆಚ್ಚಿಸಲಿದ್ದೇವೆ. ನಿಖರವಾಗಿ ಏರಿಕೆ ಮಾಡುವ ಬೆಲೆಯನ್ನು ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಂಪೆನಿಯು ಟ್ರ್ಯಾಕ್ಟರ್ ಬೆಲೆಗಳನ್ನು 5ರಿಂದ 6 ಸಾವಿರ ರೂಪಾಯಿಗಳವರೆಗೆ ಹೆಚ್ಚಿಸಲಿದೆ ಎಂದೂ ಅವರು ಹೇಳಿದ್ದಾರೆ.

ಹೋಂಡಾ ಕಂಪೆನಿ ಕೂಡ ಸ್ಥಳೀಯವಾಗಿ ತಯಾರಿಸುವ ಕಾರುಗಳ ಬೆಲೆಯನ್ನು ಏರಿಸಲಿದೆ ಎಂದು ಹೋಂಡಾ ಸೀಲ್ ಕಾರ್ಸ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ ಸೇನ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.