ಏರಿಯಲ್ ಲ್ಯಾಡರ್ ಬಳಕೆ

7

ಏರಿಯಲ್ ಲ್ಯಾಡರ್ ಬಳಕೆ

Published:
Updated:

ಬೆಂಗಳೂರು: ರಸೆಲ್ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದ ರಕ್ಷಣಾ ಕಾರ್ಯಾಚರಣೆಗೆ ಅತ್ಯಾಧುನಿಕ ತಂತ್ರಜ್ಞಾನದ ಏರಿಯಲ್ ಲ್ಯಾಡರ್ ಫ್ಲಾಟ್‌ಫಾರ್ಮ್ ವಾಹನವನ್ನು ಅಗ್ನಿಶಾಮಕ ಸಿಬ್ಬಂದಿ ಮೊದಲ ಬಾರಿಗೆ ಶನಿವಾರ ಬಳಕೆ ಮಾಡಿದರು.`ಫಿನ್‌ಲ್ಯಾಂಡ್‌ನ ಬ್ರೊಂಟೊ ಸ್ಕೈಲೈನ್ ಕಂಪೆನಿಯು ಅಭಿವೃದ್ಧಿಪಡಿಸಿರುವ ಈ ವಾಹನವನ್ನು ಒಂದು ವರ್ಷದ ಹಿಂದೆ ಇಲಾಖೆಗೆ ಖರೀದಿಸಲಾಗಿತ್ತು. ಸುಮಾರು 3.75 ಕೋಟಿ ರೂಪಾಯಿ ಬೆಲೆ ಬಾಳುವ ಈ ವಾಹನವನ್ನು ಈವರೆಗೆ ರಕ್ಷಣಾ ಕಾರ್ಯಾಚರಣೆಗೆ ಬಳಕೆ ಮಾಡಿರಲಿಲ್ಲ~ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಿರ್ದೇಶಕ ಬಿ.ಜಿ.ಚೆಂಗಪ್ಪ `ಪ್ರಜಾವಾಣಿ~ಗೆ ತಿಳಿಸಿದರು.`ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ಮುಖ್ಯವಾಗಿ ಈ ವಾಹನವನ್ನು ರಕ್ಷಣಾ ಕಾರ್ಯಾಚರಣೆಗೆ ಬಳಕೆ ಮಾಡಲಾಗುತ್ತದೆ. ಈ ವಾಹನದ ನೆರವಿನಿಂದ 12ರಿಂದ 16 ಅಂತಸ್ತುಗಳ ಕಟ್ಟಡಗಳಲ್ಲೂ ಸುಲಭವಾಗಿ ಕಾರ್ಯಾಚರಣೆ ನಡೆಸಬಹುದು. ಅಗ್ನಿ ಅನಾಹುತ ಸಂಭವಿಸಿದಾಗ ಕಟ್ಟಡದ ಒಳ ಭಾಗದಲ್ಲಿ ಸಿಲುಕುವ ಜನರನ್ನು ರಕ್ಷಿಸಲು ಮತ್ತು ಕಟ್ಟಡಗಳ ಮೇಲೆ ನೀರು ಸುರಿದು ಬೆಂಕಿ ನಂದಿಸುವ ಉದ್ದೇಶಕ್ಕೆ ಏರಿಯಲ್ ಲ್ಯಾಡರ್ ಫ್ಲಾಟ್‌ಫಾರ್ಮ್ ವಾಹನವನ್ನು ಹೆಚ್ಚಾಗಿ ಬಳಸಲಾಗುತ್ತದೆ~ ಎಂದು ಪೂರ್ವ ವಲಯ ಅಗ್ನಿಶಾಮಕ ಅಧಿಕಾರಿ ಬಿ. ಎನ್.ಮಂಜುನಾಥ್ ಅವರು  ಹೇಳಿದರು.ಇಲಾಖೆಯಲ್ಲಿ ಈ ವಾಹನವನ್ನು ಹೊರತುಪಡಿಸಿದರೆ ಟರ್ನ್ ಟೇಬಲ್ ಲ್ಯಾಡರ್ ಮತ್ತು ಸ್ನಾರ್ಕೆಲ್ ಲ್ಯಾಡರ್ ವಾಹನವನ್ನು ಬಳಕೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ  ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry