ಏರೋಲಂಪಿಕ್ಸ್: ನಾಗಪುರ ಚಾಂಪಿಯನ್

7

ಏರೋಲಂಪಿಕ್ಸ್: ನಾಗಪುರ ಚಾಂಪಿಯನ್

Published:
Updated:

ಬೆಂಗಳೂರು: ನಾಗಪುರದ ಭೋನ್ಸಾಲಾ ಸೈನಿಕ ಶಾಲೆಯ ವಿದ್ಯಾರ್ಥಿಗಳ ತಂಡವು `ರಾಷ್ಟ್ರೀಯ ಏರೋಲಂಪಿಕ್ಸ್ -2012' ಸ್ಪರ್ಧೆಯಲ್ಲಿ ಚಾಂಪಿಯನ್‌ಶಿಪ್ ಆಗಿ ಹೊರಹೊಮ್ಮಿದೆ.ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ನಗರದಲ್ಲಿ ಆಯೋಜಿಸಿದ್ದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿದ್ಯಾರ್ಥಿಗಳ ತಂಡವು ಚಾಂಪಿಯನ್‌ಶಿಪ್ ಸ್ಥಾನ ಪಡೆದಿದೆ. ವಿದ್ಯಾರ್ಥಿ ಟಿ.ಕೇತನ್ ತಂಡದ ನಾಯಕತ್ವ ವಹಿಸಿದ್ದರು. ಗುರುವಾರ ಆರಂಭವಾದ ಮೂರು ದಿನಗಳ ಸ್ಪರ್ಧೆಯು ಶನಿವಾರ ಕೊನೆಗೊಂಡಿತು.ಜಲಂಧರ್‌ನ ಅಪೀಜಾಯ್ ಶಾಲೆಯ ವಿದ್ಯಾರ್ಥಿ ತಂಡವು ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಆಯ್ಕೆಯಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಎರಡೂ ಶಾಲೆಗಳ ವಿದ್ಯಾರ್ಥಿ ತಂಡಗಳಿಗೆ ಮುಂಬರಲಿರುವ `ಏರ್ ಶೋ-2013'ಕ್ಕೆ ಉಚಿತ ಪ್ರವೇಶವನ್ನು ಘೋಷಿಸಲಾಯಿತು.ಕೆಮಿಲಾಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಡಾ.ಕೆ.ತಮಿಳ್‌ಮಣಿ ಪ್ರಶಸ್ತಿ ವಿತರಿಸಿದರು. ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಮುಖ್ಯಸ್ಥ ಪಿ.ಎಸ್.ಕೃಷ್ಣನ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry