ಏರ್‌ಇಂಡಿಯಾ ಬಿಕ್ಕಟ್ಟು: 30 ಪೈಲಟ್‌ಗಳ ವಜಾ

7

ಏರ್‌ಇಂಡಿಯಾ ಬಿಕ್ಕಟ್ಟು: 30 ಪೈಲಟ್‌ಗಳ ವಜಾ

Published:
Updated:

ನವದೆಹಲಿ/ಮುಂಬೈ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳ ಮುಷ್ಕರ ಸೋಮವಾರ 14ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ 30ಕ್ಕೂ ಹೆಚ್ಚು ಪೈಲಟ್‌ಗಳನ್ನು ಸೇವೆಯಿಂದ ವಜಾಗೊಳಿಸಿದೆ.ಇದರಿಂದಾಗಿ ವಜಾಗೊಂಡಿರುವ ಪೈಲಟ್‌ಗಳ ಸಂಖ್ಯೆ 101ಕ್ಕೆ ಏರಿದೆ.  ವಜಾಗೊಂಡ ಪೈಲಟ್‌ಗಳು ಇಂಡಿಯನ್ ಪೈಲಟ್ ಗಿಲ್ಡ್ (ಐಪಿಜಿ)ಗೆ ಸೇರಿದ್ದು, ಬೇಡಿಕೆ ಈಡೇರಿಕೆಗಾಗಿ ಈ ಒಕ್ಕೂಟದ ಪೈಲಟ್‌ಗಳೇ ಮುಷ್ಕರದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಸೋಮವಾರ ಬಿಕ್ಕಟ್ಟು ಶಮನಗೊಳಿಸಲು ಏರ್ ಇಂಡಿಯಾದ ಇತರ 10 ಕಾರ್ಮಿಕ ಸಂಘಟನೆಗಳ ಜತೆ ಮಾತುಕತೆ ನಡೆಸಿದ್ದಾರೆ. ಮುಷ್ಕರ ನಿಲ್ಲಿಸುವಂತೆ `ಐಪಿಜಿ~ ಮನವೊಲಿಸುವಂತೆ ಆ ಸಂಘಟನೆಗಳ ನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ವಜಾಗೊಂಡ ಇಬ್ಬರು ಪೈಲಟ್‌ಗಳು ಸೇವೆಗೆ ಹಾಜರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry