ಏರ್‌ಟೆಲ್: ಮೊಬೈಲ್ ಮನಿ ಸೇವೆ ಪ್ರಾರಂಭ

7

ಏರ್‌ಟೆಲ್: ಮೊಬೈಲ್ ಮನಿ ಸೇವೆ ಪ್ರಾರಂಭ

Published:
Updated:

ಬೆಂಗಳೂರು: ಮುಂಚೂಣಿ ದೂರವಾಣಿ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್, ದೇಶದಾದ್ಯಂತ 300 ನಗರಗಳಲ್ಲಿ    `ಮೊಬೈಲ್ ಮನಿ~ ಸೇವೆ ಪ್ರಾರಂಭಿಸಿದೆ.ಈ ಸೇವೆಯಡಿ ಏರ್‌ಟೆಲ್ ಗ್ರಾಹಕರು ತಮ್ಮ ಮೊಬೈಲ್ ಬಳಸಿ ವಿದ್ಯುತ್, ಅಡುಗೆ ಅನಿಲ, ಸೇರಿದಂತೆ ಬಹು ವಿಧ ಶುಲ್ಕಗಳನ್ನು ಪಾವತಿಸಬಹುದು.  `ಏರ್‌ಟೆಲ್ ಮನಿ ವ್ಯಾಲೆಟ್~ ಸೇವೆ ಪಡೆದಿರುವ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಗೂ ನೇರವಾಗಿ  ನಗದು ವರ್ಗಾವಣೆ  ಮಾಡಿಕೊಳ್ಳಬಹುದು ಎಂದು ಏರ್‌ಟೆಲ್‌ನ ಮೊಬೈಲ್ ವಾಣಿಜ್ಯ ಸೇವಾ ವಿಭಾಗ (ಎಎಂಎಸ್‌ಎಲ್) ಹೇಳಿದೆ.ಚಂದಾದಾರರು *400ೞ ಎಂದು ಡಯಲ್ ಮಾಡಿ, ಡಿಡಿಡಿ.ಜ್ಟಿಠಿಛ್ಝಿಞಟ್ಞಛಿ.ಜ್ಞಿ  ಅಂತರಜಾಲ ತಾಣಕ್ಕೆ ತೆರಳಿ ಅಥವಾ ಏರ್‌ಟೆಲ್ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸುವ ಮೂಲಕ ಈ ಸೇವೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry