ಏರ್‌ಟೆಲ್, ವೊಡಾಫೋನ್ ವಿರುದ್ಧ ಸಿಬಿಐ ಆರೋಪಪಟ್ಟಿ

7
`2ಜಿ' ತರಂಗಾಂತರ ಹಂಚಿಕೆ ಪ್ರಕರಣ

ಏರ್‌ಟೆಲ್, ವೊಡಾಫೋನ್ ವಿರುದ್ಧ ಸಿಬಿಐ ಆರೋಪಪಟ್ಟಿ

Published:
Updated:

ನವದೆಹಲಿ (ಐಎಎನ್‌ಎಸ್): `ಎನ್‌ಡಿಎ'  ಅವಧಿಯಲ್ಲಿ ಹೆಚ್ಚುವರಿ 2ಜಿ ತರಂಗಾಂತರಗಳನ್ನು ಪಡೆದಿದ್ದಕ್ಕಾಗಿ ಸಿಬಿಐ ಶುಕ್ರವಾರ ಭಾರ್ತಿ ಏರ್‌ಟೆಲ್, ವೊಡಾಫೋನ್ ಇಂಡಿಯಾ ಮತ್ತು ಹಚಿಸನ್ ಮ್ಯಾಕ್ಸ್ ಸ್ಟರ್ಲಿಂಗ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.

ಅಪರಾಧದ ಸಂಚು ರೂಪಿಸಿದ್ದಕ್ಕಾಗಿ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಶ್ಯಾಮಲಾಲ್ ಘೋಷ್ ಮತ್ತು ಇತರ ಮೂರು ಟೆಲಿಕಾಂ ಕಂಪೆನಿಗಳ ಹೆಸರನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.ಎನ್‌ಡಿಎ ಅವಧಿಯಲ್ಲಿ ಪ್ರಮೋದ್ ಮಹಾಜನ್ ದೂರಸಂಪರ್ಕ ಸಚಿವರಾಗಿದ್ದಾಗ ಈ ಅವ್ಯವಹಾರ ನಡೆದಿದೆ ಎಂದು ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಈ  ಕಂಪೆನಿಗಳ ವಿರುದ್ಧ ಕ್ರಮ ಜರುಗಿಸುವಂತೆ ನ. 29ರಂದು ಸುಪ್ರೀಂಕೋರ್ಟ್ ಸಿಬಿಐಗೆ ಸೂಚಿಸಿತ್ತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry