ಏರ್‌ ಇಂಡಿಯಾ ಅಧಿಕಾರಿ ನಾಪತ್ತೆ

7

ಏರ್‌ ಇಂಡಿಯಾ ಅಧಿಕಾರಿ ನಾಪತ್ತೆ

Published:
Updated:

ಬೆಂಗಳೂರು: ಏರ್ ಇಂಡಿಯಾ ವಿಮಾನ ಕಾರ್ಯಾಚರಣೆಗಳ ಹಿರಿಯ ವ್ಯವಸ್ಥಾಪಕ ಅರುಣ್‌ ಮೆಹ್ತಾ (41) ಎಂಬುವರು ಶುಕ್ರವಾರ ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಸಂಬಂಧ ಅವರ ಪತ್ನಿ ಅನಿತಾ ಎಚ್‌ಎಎಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‘ಇಸ್ಲಾಂಪುರ ಬಸ್‌ ನಿಲ್ದಾಣದ ಬಳಿ ಕಾರು ನಿಲ್ಲಿಸಿ ಅವರು ವೋಲ್ವೊ ಬಸ್‌ನಲ್ಲಿ ಕಚೇರಿಗೆ ಹೋಗುತ್ತಿದ್ದರು. ಕಚೇರಿಯಿಂದ ಬಸ್‌ನಲ್ಲೆ ಇಸ್ಲಾಂಪುರದವರೆಗೆ ಬಂದು ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕರೆ ಮಾಡಿದ ಅರುಣ್‌ ಮನೆಗೆ ಬರುತ್ತಿರುವುದಾಗಿ ತಿಳಿಸಿದರು.ಆದರೆ, 11 ಗಂಟೆಯಾದರೂ ಅವರು ಮನೆಗೆ ಬರಲಿಲ್ಲ. ಅವರು ನಿಲ್ಲಿಸಿದ್ದ ಕಾರು ಇಸ್ಲಾಂಪುರ ಬಸ್‌ ನಿಲ್ದಾಣದ ಬಳಿಯೇ ಇತ್ತು’ ಎಂದು ಅನಿತಾ ದೂರಿನಲ್ಲಿ ತಿಳಿಸಿದ್ದಾರೆ.‘ಅರುಣ್‌ ಫೋಟೊ ತೋರಿಸಿ ಬಸ್ ನಿಲ್ದಾಣದ ಬಳಿಯಿದ್ದ ಕೆಲ ವ್ಯಾಪಾರಿಗಳನ್ನು ವಿಚಾರಿಸಿದಾಗ, ಸಮವಸ್ತ್ರದಲ್ಲಿದ್ದ ಅವರು ಬಸ್‌ನಿಂದ ಇಳಿದು ಕೆಲ ನಿಮಿಷ ಕಾರಿನಲ್ಲಿ ಕುಳಿತು ಬಳಿಕ ಕಾರಿನಿಂದ ಇಳಿದು ಟೋಟಲ್‌ ಮಾಲ್‌ ಕಡೆಗೆ ನಡೆದು ಹೋದರು ಎಂದು ಮಾಹಿತಿ ನೀಡಿದರು. ಆದರೆ, ಟೋಟಲ್‌ ಮಾಲ್‌ ಸುತ್ತಮುತ್ತ ಹುಡುಕಾಡಿದರೂ ಅವರು ಸಿಗಲಲ್ಲ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry