ಏರ್ ಇಂಡಿಯಾಕ್ಕೆ ಪ್ರಶಸ್ತಿ

7
ಒಬೈದುಲ್ಲಾ ಖಾನ್ ಗೋಲ್ಡ್ ಕಪ್ ಹಾಕಿ

ಏರ್ ಇಂಡಿಯಾಕ್ಕೆ ಪ್ರಶಸ್ತಿ

Published:
Updated:
ಏರ್ ಇಂಡಿಯಾಕ್ಕೆ ಪ್ರಶಸ್ತಿ

ಭೋಪಾಲ್ (ಪಿಟಿಐ): ಏರ್ ಇಂಡಿಯಾ ತಂಡದವರು ಇಲ್ಲಿ ನಡೆದ ಅಂತರರಾಷ್ಟ್ರೀಯ ಒಬೈದುಲ್ಲಾ ಖಾನ್ ಗೋಲ್ಡ್ ಕಪ್ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.ತುಂಬಾ ಕುತೂಹಲ ಮೂಡಿಸಿದ್ದ ಫೈನಲ್‌ನಲ್ಲಿ ಏರ್ ಇಂಡಿಯಾ ತಂಡ 4-3 ಗೋಲುಗಳಿಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತಂಡವನ್ನು ಮಣಿಸಿತು.ಈ ಮೂಲಕ ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಂಡರು. ಹಿಂದಿನ  ಬಾರಿಯ ಫೈನಲ್‌ನಲ್ಲಿ ಏರ್ ಇಂಡಿಯಾ ಎದುರು ಗೆದ್ದ ಐಒಸಿ ಚಾಂಪಿಯನ್ ಆಗಿತ್ತು.ಏರ್ ಇಂಡಿಯಾ ತಂಡದವರು ವಿರಾಮದ ವೇಳೆಗೆ 2-1 ಗೋಲುಗಳಿಂದ ಮುನ್ನಡೆ ಹೊಂದಿದ್ದರು. ಈ ತಂಡದ ನಾಯಕ ಅರ್ಜುನ್ ಹಾಲಪ್ಪ (24ನೇ ಹಾಗೂ 59ನೇ ನಿಮಿಷ )ಹಾಗೂ ಶಿವೇಂದ್ರ ಸಿಂಗ್ (7ನೇ ಹಾಗೂ 36ನೇ ನಿಮಿಷ) ತಲಾ ಎರಡು ಗೋಲು ಗಳಿಸಿದರು. ಪರಾಭವಗೊಂಡ ಐಒಸಿ ತಂಡದ ಗುರ್ಜಿಂದರ್ ಸಿಂಗ್ ಮೂರು ಗೋಲು ತಂದಿತ್ತರು.ವಿಜೇತ ಏರ್ ಇಂಡಿಯಾ ರೂ. 21 ಲಕ್ಷ ಬಹುಮಾನ ಪಡೆಯಿತು. ಶಿವೇಂದ್ರ `ಪಂದ್ಯ ಶ್ರೇಷ್ಠ' ಗೌರವ ಪಡೆದರು. ಗುರ್ಜಿಂದರ್ `ಟೂರ್ನಿ ಶ್ರೇಷ್ಠ' ಎನಿಸಿದರು.ಮಾಜಿ ಆಟಗಾರರಾದ ಅಸ್ಲಮ್ ಶೇರ್ ಖಾನ್, ಸಮೀರ್ ದಾದ್, ಧನರಾಜ್ ಪಿಳ್ಳೈ, ಅಶೋಕ್ ಧ್ಯಾನ್ ಚಂದ್,    ಇನಾಮುರ್ ರೆಹಮಾನ್, ಮುಮ್ತಾಜ್ ಮಲಿಕ್, ಸಲೀಮ್ ಅಬ್ಬಾಸಿ ಹಾಗೂ ಖುರ್ಶಿದ್ ಅಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry