ಏರ್ ಇಂಡಿಯಾ: ಆಹಾರ ಪೂರೈಕೆಗೆ ನಿರ್ಬಂಧ

7

ಏರ್ ಇಂಡಿಯಾ: ಆಹಾರ ಪೂರೈಕೆಗೆ ನಿರ್ಬಂಧ

Published:
Updated:

ನವದೆಹಲಿ (ಪಿಟಿಐ): ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ, ಅಲ್ಪಾವಧಿ ದೂರದ ಪ್ರಯಾಣ ಸಂದರ್ಭದಲ್ಲಿ ಪ್ರಯಾಣಿಕರಿಗೆ ಬಿಸಿ, ಬಿಸಿ ಆಹಾರ ಪೂರೈಸುವುದನ್ನು ಸ್ಥಗಿತಗೊಳಿಸಿದೆ.ಈ ನಿರ್ಬಂಧವು ಫೆಬ್ರುವರಿ 1ರಿಂದಲೇ ಜಾರಿಗೆ ಬಂದಿದೆ.

ಒಂದು ಗಂಟೆಯಿಂದ ಒಂದೂವರೆ ಗಂಟೆ ಅವಧಿ ಒಳಗಿನ ಕಡಿಮೆ ದೂರದ ಪ್ರಯಾಣ ಸಂದರ್ಭದಲ್ಲಿ  ಬಿಸಿ ಆಹಾರ ಬದಲಿಗೆ ಈ ಮೊದಲೇ ಪ್ಯಾಕ್ ಮಾಡಲಾಗಿದ್ದ ಕುರುಕಲು ತಿಂಡಿ, ನೀರು ಮತ್ತು ಟೆಟ್ರಾಪ್ಯಾಕ್‌ನಲ್ಲಿ ಹಣ್ಣಿನ ರಸ ನೀಡಲು ನಿರ್ಧರಿಸಿದೆ.

 

ಕಾಫಿ ಅಥವಾ ಚಹವನ್ನು ಕೋರಿಕೆ ಮೇರೆಗೆ ನೀಡಲಿದೆ. ಪ್ರಯಾಣದ ಅವಧಿ ಒಂದೂವರೆ ಗಂಟೆ ( 90 ನಿಮಿಷ) ಇದ್ದರೆ, ಸ್ಯಾಂಡ್‌ವಿಚ್ ಜತೆಗೆ ಕಾಫಿ ಅಥವಾ ಚಹ ಪೂರೈಸಲಾಗುವುದು.ಎಕ್ಸಿಕ್ಯುಟಿವ್ ಕ್ಲಾಸ್‌ನ ಪ್ರಯಾಣಿಕರಿಗೆ ಈ ನಿರ್ಬಂಧ ಅನ್ವಯಿಸಲಾರದು. ಅವರಿಗೆ ಈ ಮೊದಲಿನಂತೆಯೇ ಬಿಸಿ ಆಹಾರ ನೀಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry