ಶುಕ್ರವಾರ, ಫೆಬ್ರವರಿ 26, 2021
26 °C

ಏರ್ ಇಂಡಿಯಾ ನಿಲುವು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರ್ ಇಂಡಿಯಾ ನಿಲುವು ಬದಲು

ನವದೆಹಲಿ (ಪಿಟಿಐ): ದೇಶದ ವಾಯುಯಾನ ಕ್ಷೇತ್ರಕ್ಕೆ ಸಂಬಂಧಿಸಿದ ‘5/20’ ನಿಯಮ ಕುರಿತು ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ (ಎಐ) ಇದೀಗ ತನ್ನ ಈ ಮೊದಲಿನ ನಿಲುವು ಬದಲಿಸಿದೆ.ಈ ನಿಯಮವನ್ನು ಜಾರಿಗೆ ತರುವಾಗ ರಾಷ್ಟ್ರೀಯ ಹಿತಾಸಕ್ತಿಯನ್ನು  ಗಮನದಲ್ಲಿ ಇಟ್ಟುಕೊಳ್ಳುವಂತೆ ‘ಎಐ’  ಅಭಿಪ್ರಾಯಪಟ್ಟಿದೆ. ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತನ್ನ  ಬದಲಾದ ನಿಲುವನ್ನು ತಿಳಿಸಿದೆ.  ಇದಕ್ಕೂ ಮೊದಲು ಏರ್ ಇಂಡಿಯಾ, ದೇಶದ ಕೆಲ ಖಾಸಗಿ ವಿಮಾನಯಾನ ಸಂಸ್ಥೆಗಳ ಜತೆ ಸೇರಿ ‘5/20’ ನಿಯಮ ಪಾಲನೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಸಿತ್ತು.ಹೊಸ ಅಧ್ಯಕ್ಷರಾಗಿ  ಅಶ್ವನಿ ಲೋಹಾನಿ  ಅಧಿಕಾರ ಸ್ವೀಕರಿಸಿದ ನಂತರ ಸಂಸ್ಥೆಯ ಈ ಮುಂಚಿನ ನಿಲುವು ಬದಲಾಗಿದೆ.

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಖಾಸಗಿ ವಿಮಾನ ಯಾನ ಸಂಸ್ಥೆಗಳಾದ ಏರ್‌ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾ ‘5/20’ ನಿಯಮ ರದ್ದತಿಗೆ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿವೆ.‘5/20’ ನಿಯಮಾವಳಿ ಪ್ರಕಾರ, ಐದು ವರ್ಷ ಪೂರೈಸದ ಹಾಗೂ ಕನಿಷ್ಠ 20 ವಿಮಾನ ಹೊಂದಿರದ ವಿಮಾನಯಾನ ಕಂಪೆನಿಗಳಿಗೆ ಅಂತಾರಾಷ್ಟ್ರೀಯ ಹಾರಾಟಕ್ಕೆ ಅನುಮತಿಇರುವುದಿಲ್ಲ. ಅಂತರರಾಷ್ಟ್ರೀಯ ಮಾರ್ಗದಲ್ಲಿ ದೇಶಿ  ವಿಮಾನ ಯಾನ ಸಂಸ್ಥೆಗಳ ಸೇವೆ ವಿಸ್ತರಣೆಗೆ ಈ ನಿಯಮ ತೊಡಕಾಗಿ ಪರಿಣಮಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.