ಏರ್ ಇಂಡಿಯ: ರೂ. 300 ಕೋಟಿ ನಷ್ಟ

7

ಏರ್ ಇಂಡಿಯ: ರೂ. 300 ಕೋಟಿ ನಷ್ಟ

Published:
Updated:

ನವದೆಹಲಿ(ಐಎಎನ್‌ಎಸ್): ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ `ಏರ್ ಇಂಡಿಯ~ ಸಂಸ್ಥೆಗೆ ಪೈಲಟ್‌ಗಳ ಮೂರು ವಾರಗಳ ಮುಷ್ಕರ ಒಟ್ಟು ರೂ 300 ಕೋಟಿಯಷ್ಟು ನಷ್ಟ ಅನುಭವಿಸುವಂತೆ ಮಾಡಿದೆ.

ಪೈಲಟ್‌ಗಳ ಮುಷ್ಕರ 21ನೇ ದಿನವೂ ಮುಂದುವರಿದಿದೆ. ನಷ್ಟದ ಪ್ರಮಾಣವೂ ದಿನಂಪ್ರತಿ ಹೆಚ್ಚುತ್ತಲೇ ಇದೆ. ಪ್ರಯಾಣಿಕರ ಟಿಕೆಟ್ ರದ್ದುಪಡಿಸಬೇಕಾಗಿದ್ದು, ಉಳಿಕೆ ಮಾನವ ಶಕ್ತಿಯನ್ನೂ ಬಳಸಿಕೊಳ್ಳಲಾಗದೇ ಇರುವುದು ಮತ್ತು ಬೋಯಿಂಗ್-777 ವಿಮಾನಗಳು ರನ್‌ವೇನಲ್ಲಿಯೇ ಉಳಿದಿರುವುದರ ಪರಿಣಾಮವಾಗಿ ರೂ 300 ಕೋಟಿಯಷ್ಟು ನಷ್ಟವಾಗಿದೆ ಎಂದು ಏರ್ ಇಂಡಿಯ ಅಧಿಕಾರಿಗಳು ಸೋಮವಾರ ಬೇಸರ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲದರ ಮಧ್ಯೆಯೂ ಅಂತರರಾಷ್ಟ್ರೀಯ ವಿಮಾನಯಾನ ಮಾರ್ಗದಲ್ಲಿನ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವಿಕೆ ಎಂದಿನಂತೆಯೇ ಇದೆ. ಕಡಿಮೆ ದರದಲ್ಲಿ ಹೆಚ್ಚು ಆಸನಗಳು ಲಭ್ಯವಿರುವ ಕಾರಣ ದೇಶೀಯ ವಿಮಾನಯಾನದಲ್ಲಿಯೂ ಪ್ರಯಾಣಿಕ ದಟ್ಟಣೆ ಮುಂದುವರಿದಿದೆ ಎಂದು ವಿವರಿಸಿದ್ದಾರೆ ಅಧಿಕಾರಿಗಳು.

ಏಪ್ರಿಲ್‌ನಲ್ಲಿ ದೇಶದ ವಿಮಾನಯಾನ ಕ್ಷೇತ್ರದಲ್ಲಿ ಶೇ 17.6ರ ಮಾರುಕಟ್ಟೆ ಪಾಲಿನೊಂದಿಗೆ 4ನೇ ಸ್ಥಾನದಲ್ಲಿದ್ದ ಏರ್‌ಇಂಡಿಯ, ಪೈಲಟ್‌ಗಳ ಸತತ ಮುಷ್ಕರದಿಂದಾಗಿ ಮೇ ತಿಂಗಳಲ್ಲಿ ತೀವ್ರ ಸಂಕಷ್ಟಕ್ಕೊಳಗಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry