ಏರ್ ಷೋ ವಿಮಾನ ದುರಂತ: ಮೂವರ ಸಾವು

7

ಏರ್ ಷೋ ವಿಮಾನ ದುರಂತ: ಮೂವರ ಸಾವು

Published:
Updated:
ಏರ್ ಷೋ ವಿಮಾನ ದುರಂತ: ಮೂವರ ಸಾವು

ಲಾಸ್‌ಏಂಜಲೀಸ್ (ಐಎಎನ್‌ಎಸ್/ ಎಪಿ): ಇಲ್ಲಿ ಶನಿವಾರ ನಡೆಯುತ್ತಿದ್ದ ಅಮೆರಿಕದ ವಾರ್ಷಿಕ ಏರ್‌ಷೋ ನಲ್ಲಿ ಎರಡನೇ ಜಾಗತಿಕ ಸಮರ ಕಾಲದ ಹಳೆಯ ವಿಮಾನವೊಂದು ನೆಲಕ್ಕಪ್ಪಳಿಸಿದ ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದು, ಇತರ 50 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 25 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ದುರಂತದಿಂದಾಗಿ ಸಡಗರ ತುಂಬಿದ್ದ ಏರ್ ಷೋದಲ್ಲಿ ಶೋಕದ ಛಾಯೆ ಆವರಿಸಿತು.80 ವರ್ಷದ ಪೈಲಟ್ ಚಲಾಯಿಸುತ್ತಿದ್ದ ವಿಮಾನ ಹಠಾತ್ತನೆ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿತು. ದುರ್ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿರುವುದು ಖಚಿತ ಎಂದು ಕ್ಸಿನ್ ಹುವಾ  ಸುದ್ದಿಸಂಸ್ಥೆ ವರದಿ ಮಾಡಿದೆ.ಸಮಾರಂಭದಲ್ಲಿ 7500 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.ವಿಮಾನ ದುರಂತದ ಬಳಿಕ ಇಡೀ ಪ್ರದೇಶದಲ್ಲಿ ರಕ್ತಸಿಕ್ತ ವಾತಾವರಣ ಕಂಡು ಬಂದಿತು. ಪ್ರದೇಶವು ಗಾಯಾಳುಗಳು ಮತ್ತು ಅವರ ಆಕ್ರಂದನದಿಂದ ತುಂಬಿಹೋಯಿತು ಎಂದು ಪ್ರತ್ಯಕ್ಷದರ್ಶಿಗಳು  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry