ಏರ್ ಸ್ಕೂಪ್, ಫೋರ್ಕ್ ಲಾಕ್

7

ಏರ್ ಸ್ಕೂಪ್, ಫೋರ್ಕ್ ಲಾಕ್

Published:
Updated:
ಏರ್ ಸ್ಕೂಪ್, ಫೋರ್ಕ್ ಲಾಕ್

ಏರ್ ಸ್ಕೂಪ್, ಫೋರ್ಕ್ ಲಾಕ್

ವಾಹನದ ಅನ್ವೇಷಣೆಯೊಂದಿಗೆ ಜೀವನ ಸರಳವೂ, ಸುಂದರವೂ ಆಗಿದ್ದು ಮಾನವ ಅನ್ವೇಷಣೆಯ ಅದ್ಭುತವೇ ಸರಿ. ಆದರೆ ಈ ವಾಹನಗಳನ್ನೂ ಪ್ರೀತಿಯಿಂದ, ಕಾಳಜಿ ವಹಿಸಿ ನೋಡಿಕೊಳ್ಳಬೇಕಾದ ಅನಿವಾರ್ಯತೆಯೂ ಒದಗಿ ಬಂದಿತು.

 ವಾಹನಗಳ ಬಳಕೆ ನಿರಂತರವಾದ್ದರಿಂದ ಅವು ಬಳಸುತ್ತ ಬಳಸುತ್ತ ಸವೆಯುತ್ತವೆ. ಕಾಲ ಕಳೆದಂತೆ ಹಳೆಯದಾಗಿ ಕೆಡುತ್ತವೆ. ಹೊಸತನ್ನು ತೆಗೆದುಕೊಳ್ಳಲೇಬೇಕಾದ ಸ್ಥಿತಿಯೂ ಏರ್ಪಡುತ್ತದೆ. ಆದರೆ ಬಳಕೆಯ ಸಂದರ್ಭದಲ್ಲೇ ಅವನ್ನು ಜಾಗರೂಕತೆಯಿಂದ ನೋಡಿಕೊಂಡಲ್ಲಿ ಬಾಳಿಕೆ ಸಹಜವಾಗೇ ಹೆಚ್ಚುತ್ತದೆ.

ಏರ್ ಸ್ಕೂಪ್

ಅದರಲ್ಲಿ ಮುಖ್ಯ ಪಾತ್ರ ವಹಿಸುವುದು ವಾಹನವನ್ನು ತಣ್ಣಗಿರಿಸುವುದು. ಅಂದರೆ ಎಂಜಿನ್‌ನ್ನು ತಣ್ಣಗಿರುವಂತೆ ನೋಡಿಕೊಳ್ಳುವುದು. ಇದಕ್ಕಾಗಿ ಅನೇಕ ತಂತ್ರಜ್ಞಾನಗಳು ಕಾಲಾಂತರದಲ್ಲಿ ಅಭಿವೃದ್ಧಿಗೊಂಡಿವೆ.

ಎಂಜಿನ್‌ನಲ್ಲೇ ಅಂತರ್ಗತವಾಗಿರುವ ಏರ್ ಫಿನ್‌ಗಳು, ರೇಡಿಯೇಟರ್ ಈ ಕೆಲಸವನ್ನು  ಮಾಡುತ್ತವಾದರೂ ಹೆಚ್ಚುವರಿಯಾಗಿ ಎಂಜಿನ್‌ನ್ನು ತಣ್ಣಗಿರಿಸಬೇಕಾದ ಅನಿವಾರ್ಯತೆ ಕೆಲವು ವಾಹನಗಳಿಗೆ ಬೇಕಾಗುತ್ತದೆ.ರೇಸಿಂಗ್ ಕಾರ್ ಹಾಗೂ ಹೆಚ್ಚು ಎಂಜಿನ್ ಸಾಮರ್ಥ್ಯ ಇರುವ ಕಾರ್‌ಗಳಲ್ಲಿ ಎಂಜಿನ್‌ನ ಆರ್‌ಪಿಎಂ (ರೊಟೇಷನ್ಸ್ ಪರ್ ಮಿನಿಟ್) ಹೆಚ್ಚಿರುತ್ತದೆ. ಇದರಿಂದ ಎಂಜಿನ್‌ನ ಶಾಖ ಏರುತ್ತದೆ. ಇದರ ಅಡ್ಡಪರಿಣಾಮವಾಗಿ ಎಂಜಿನ್ ಸೀಸ್ ಆಗುವ ಸಾಧ್ಯತೆಗಳು ಹೆಚ್ಚು.ಇದಕ್ಕಾಗಿ ವಾಹನಗಳಲ್ಲಿ ಏರ್ ಸ್ಕೂಪ್‌ಗಳಿರುತ್ತವೆ. ಇದು ಎಂಜಿನ್‌ನ ಬಾನೆಟ್, ವಾಹನದ ಮಡ್‌ಗಾರ್ಡ್‌ಗಳ ಮೇಲೆ ಇರುತ್ತದೆ. ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಗಾಳಿಯನ್ನು ತಡೆದು ನಿಲ್ಲಿಸಬಲ್ಲ ರಚನೆಯಿದು.

 

ತಡೆಯಲ್ಪಡುವ ಗಾಳಿ ಎಂಜಿನ್‌ಗೆ ನೇರವಾಗಿ ಬೀಳುವಂತೆ ವ್ಯವಸ್ಥೆಯಿರುತ್ತದೆ. ವಾಹನದ ಚಲನೆಯಲ್ಲಿ ತಣ್ಣನೆಯ ಗಾಳಿ ಎಂಜಿನ್ ಮೇಲೆ ಬಿದ್ದು ತಣ್ಣಗಾಗುತ್ತದೆ.

ಫೋರ್ಕ್ ಲಾಕ್
ಸೈಕಲ್‌ಗಳಲ್ಲಿ ಲಾಕ್ ವ್ಯವಸ್ಥೆ ಆರಂಭದಲ್ಲಿ ಇರಲಿಲ್ಲ. ವಾಸ್ತವದಲ್ಲಿ ಸೈಕಲ್‌ಗಳಿಗೆ ಸ್ಟ್ಯಾಂಡ್ ಸಹ ಇರಲಿಲ್ಲ. ಅವೆುರಿಕಾದಲ್ಲಿ ಇಂದಿಗೂ ಸೈಕಲ್‌ಗಳಿಗೆ ಸ್ಟ್ಯಾಂಡ್ ಇರುವುದಿಲ್ಲ. ಬದಲಿಗೆ ರಸ್ತೆ ಬದಿಯಲ್ಲೇ ಶಾಶ್ವತ ಸೈಕಲ್ ಸ್ಟ್ಯಾಂಡ್‌ಗಳನ್ನು ರಚಿಸಿದ್ದು ಅಲ್ಲಿ ಸೈಕಲ್‌ಗಳನ್ನು ನಿಲ್ಲಿಸಬಹದು.ಆದರೆ ಏಷ್ಯನ್ ರಾಷ್ಟ್ರಗಳಲ್ಲಿ ಸೈಕಲ್‌ಗಳಿಗೇ ಸ್ಟ್ಯಾಂಡ್ ಇರುತ್ತದೆ. ಅಂತೆಯೇ ಲಾಕ್‌ಗಳೂ ಸಹ. ನಮ್ಮಲ್ಲೇ ಸೈಕಲ್ ಲಾಕ್ ಬಳಕೆ ಸಹ ಹೆಚ್ಚು. ಹಿಂದಿನ ಚಕ್ರದ ಬಳಿ ಸೈಕಲ್‌ನ ಫ್ರೇಂ ಜತೆಗೆ ಹೊಂದಿಕೊಂಡಂತೆ ಲಾಕ್ ಇರುತ್ತದೆ.ಇದಕ್ಕಿಂತಲೂ ವಿಶೇಷವಾದದ್ದು ಫೋರ್ಕ್ ಲಾಕ್. ಈ ಫೋರ್ಕ್ ಲಾಕ್ ಸೈಕಲ್‌ನ ಮುಂಭಾಗದ ಫೋರ್ಕ್‌ಗೆ (ಚಕ್ರವನ್ನು ಬಂಧಿಸುವ ಸಾಧನ) ಅಳವಡಿತಗೊಂಡಿರುತ್ತದೆ.ಇದು ಸೈಕಲ್‌ನ ಚಕ್ರದ ಸ್ಪೋಕ್‌ಗಳ ಮಧ್ಯೆ ತೂರಿ ಚಕ್ರ ತಿರುಗದಂತೆ ನೋಡಿಕೊಳ್ಳುತ್ತದೆ. ಸೈಕಲ್‌ನ ಹ್ಯಾಂಡಲ್ ತಿರುಗದಂತೆ ನೋಡಿಕೊಳ್ಳುವ ಲಾಕ್, ಸೆಂಟ್ರಲ್ ಲಾಕ್‌ಗಳು ಸಹ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry