ಬುಧವಾರ, ನವೆಂಬರ್ 13, 2019
17 °C

ಏಳು ಕ್ಷೇತ್ರ: 94 ಮಂದಿ ಕಣದಲ್ಲಿ

Published:
Updated:

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 94 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದ್ದ ಶನಿವಾರ 33 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದರು. ಕೊನೆಯಲ್ಲಿ ಆರು ಮಂದಿ ಮಹಿಳೆಯರು ಹಾಗೂ 88 ಮಂದಿ ಪುರುಷರು ಸ್ಪರ್ಧೆಯಲ್ಲಿ ಉಳಿದರು.ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಇದೇ 17ರವರೆಗೆ ಜಿಲ್ಲೆಯಲ್ಲಿ ಒಟ್ಟು 127 ಮಂದಿ ಕಣದಲ್ಲಿ ಉಳಿದಿದ್ದರು.ನವಲಗುಂದ ಕ್ಷೇತ್ರದಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷೇತರರು ಸೇರಿದಂತೆ ಕ್ಷೇತ್ರದಲ್ಲಿ 16 ಮಂದಿ ಉಮೇದುವಾರರಿದ್ದು, ಯಾರೊಬ್ಬರೂ ಕಣದಿಂದ ಹಿಂದೆ ಸರಿಯಲಿಲ್ಲ. ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 11 ಮಂದಿ ಕಣದಲ್ಲಿ ಉಳಿದಿದ್ದು, ಯಾರೂ ನಾಮಪತ್ರ ಹಿಂದಕ್ಕೆ ಪಡೆಯಲಿಲ್ಲ. ಧಾರವಾಡ ಕ್ಷೇತ್ರದಲ್ಲಿ 22 ಕಣದಲ್ಲಿದ್ದು, 9 ಮಂದಿ ನಾಮಪತ್ರ ಹಿಂದಕ್ಕೆ ಪಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ 13 ಮಂದಿ ಮಾತ್ರ ಅಂತಿಮವಾಗಿ ಕಣದಲ್ಲಿ ಉಳಿದರು.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ 10 ಮಂದಿ ನಾಮಪತ್ರ ಸಲ್ಲಿಸಿದ್ದು, ಒಬ್ಬರು ಹಿಂದಕ್ಕೆ ಪಡೆದ ಪರಿಣಾಮ ಈಗ 9 ಮಂದಿ ಈಗ ಪೈಪೋಟಿ ನಡೆಸಿದ್ದಾರೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪರ್ಧಿಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ 32 ಮಂದಿ ನಾಮಪತ್ರ ಸಲ್ಲಿಸಿದ್ದು, ಶನಿವಾರ 13 ಮಂದಿ ಕಣದಿಂದ ಹಿಂದಕ್ಕೆ ಸರಿದ ಪರಿಣಾಮ ಕೊನೆಗೆ 19 ಮಂದಿ ಸ್ಪರ್ಧೆಗೆ ಇಳಿದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊದಲು 24 ಮಂದಿ ನಾಮಪತ್ರ ಸಲ್ಲಿಸಿದ್ದು, ಆರು ಮಂದಿ ಉಮೇದುವಾರಿಕೆ ಹಿಂದಕ್ಕೆ ಪಡೆದ ಪರಿಣಾಮ 18 ಮಂದಿ ಕೊನೆಗೆ ಪೈಪೋಟಿಗೆ ಇಳಿದಿದ್ದಾರೆ.ಕಲಘಟಗಿ ಕ್ಷೇತ್ರದಿಂದ 12 ಮಂದಿ ನಾಮಪತ್ರ ಸಲ್ಲಿಸಿದ್ದು, ನಾಲ್ಕು ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಮಹಿಳೆಯೊಬ್ಬರು ಸೇರಿದಂತೆ 8 ಮಂದಿ ಕಣದಲ್ಲಿ ಉಳಿದಿದ್ದಾರೆ.40 ಮಂದಿ ಪಕ್ಷೇತರರು: ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲಲಿ ಅಂತಿಮವಾಗಿ 40 ಮಂದಿ ಪಕ್ಷೇತರರು ಕಣದಲ್ಲಿ ಉಳಿದಿದ್ದಾರೆ. ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ 11 ಪಕ್ಷೇತರರು ಇದ್ದು, ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು, ನವಲಗುಂದದಲ್ಲಿ ಏಳು, ಧಾರವಾಡದಲ್ಲಿ ಆರು, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಹಾಗೂ ಕುಂದಗೋಳ ಮತ್ತು ಕಲಘಟಗಿ ಕ್ಷೇತ್ರಗಳಲ್ಲಿ ತಲಾ ಮೂವರು ಪಕ್ಷೇತರರು ಕಣದಲ್ಲಿ ಉಳಿದಿದ್ದಾರೆ.ಕಣದಲ್ಲಿ ಉಳಿದ ಅಭ್ಯರ್ಥಿಗಳು

ಹು-ಧಾ ಸೆಂಟ್ರಲ್ ಕ್ಷೇತ್ರ

ಜಗದೀಶ ಶೆಟ್ಟರ್ (ಬಿಜೆಪಿ), ಡಾ.ಮಹೇಶ ನಾಲ್ವಾಡ (ಕಾಂಗ್ರೆಸ್), ಪ್ರೇಮನಾಥ ಚಿಕ್ಕತುಂಬಳ (ಬಿಎಸ್‌ಪಿ), ತಬ್ರೇಜ್ ಸಂಶಿ( ಜೆಡಿಎಸ್), ರೇಣುಕಾ ಸಿಂಧೆ (ಎನ್‌ಸಿಪಿ), ರವಿ ಕುಲಾಲ್ (ಜೆಡಿಯು), ಎಸ್‌ಎಸ್‌ಪಾಟೀಲ (ಕೆಜೆಪಿ), ಅಜೀಜ್‌ನ್ಾ ಮೋಮಿನ್ (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್), ಪಕ್ಷೇತರ ಅಭ್ಯರ್ಥಿಗಳು: ಗೋಪಾಲ ಕುಲಕರ್ಣಿ, ಬಾಬಾರಾವ್ ಗಂಟಿವಾಲೆ, ಮನೋಜ ಹಾನಗಲ್, ರವಿ ಮುಗುದ್, ವಿನೋದ ಪವಾರ್, ವಿಶಾಲ ಸುತಗಟ್ಟಿ, ವಿಷ್ಣು ಸಾ ಪವಾರ್, ಎಸ್.ಆರ್.ಕಂಪ್ಲಿ, ಸಯ್ಯದ್ ಮುಲ್ಲಾ,  ಸಿರಾಜ್ ಅಹಮದ್ ಮುಲ್ಲಾ, ಗುಡಿಪಾಟಿ ಜಾಸೂವಾ.ಹುಬ್ಬಳ್ಳಿ-ಧಾರವಾಡ ಪೂರ್ವ

ವೀರಭದ್ರಪ್ಪ ಹಾಲಹರವಿ (ಬಿಜೆಪಿ), ಪ್ರಸಾದ್ ಅಬ್ಬಯ್ಯ (ಕಾಂಗ್ರೆಸ್), ಆಲ್ಕೋಡು ಹನುಮಂತಪ್ಪ (ಜೆಡಿಎಸ್), ಶಂಕರಪ್ಪ ಬಿಜವಾಡ (ಕೆಜೆಪಿ), ನಿಂಗಪ್ಪ ಮರಗಾನೂರ (ಬಿಎಸ್‌ಪಿ) ಚನ್ನುಮಲ್ಲಿಗವಾಡ (ಆರ್‌ಪಿಐ-ಎ), ಬಳ್ಳಾರಿ ಬಾಬು ಸುಂಕಪ್ಪ (ಬಿಎಸ್‌ಆರ್ ಕಾಂಗ್ರೆಸ್). ಪಕ್ಷೇತರರು: ಗುರುನಾಥ ಶಂಕರ ಗಬ್ಬೂರ, ವೆಂಕಪ್ಪ ಫ.ಸಿದ್ಧನಾಥ.ಹುಬ್ಬಳ್ಳಿ-ಧಾರವಾಡ ಪಶ್ಚಿಮ

ಅರವಿಂದ ಬೆಲ್ಲದ (ಬಿಜೆಪಿ),ಇಸ್ಮಾಯಿಲ್ ತಮಟಗಾರ (ಜೆಡಿಎಸ್),ಬಕ್ಕಾಯಿ ಲಕ್ಷ್ಮಣ ಚಂದ್ರಪ್ಪ (ಬಿಎಸ್‌ಪಿ)

ಎಸ್.ಆರ್.ಮೋರೆ (ಕಾಂಗ್ರೆಸ್), ವಾದಿರಾಜ ಮಧುಸೂಧನ ಮನ್ನಾರಿ (ಎನ್‌ಸಿಪಿ), ಡಂಬಳ ಹನುಮಂತ (ಬಿಎಸ್‌ಆರ್ ಕಾಂಗ್ರೆಸ್)ಎಚ್.ಜಿ.ದೇಸಾಯಿ (ಎಸ್‌ಯುಸಿಐ), ನಾಗರಾಜ ತಿಗಡಿ (ಲೋಕ ಸತ್ತಾ ಪಕ್ಷ), ಮೋಹನ ಲಿಂಬಿಕಾಯಿ (ಕೆಜೆಪಿ), ರಾಜು ಕಾಂಬಳೆ (ಬಿಜೆಡಿ). ಪಕ್ಷೇತರರು: ಅನ್ವರಸಾಬ ಭಾಷಾಸಾಬ ರಾಯಬಾಗ,ಅನಿತಾ ಹೊರಡಿ,ಈಶ್ವರ ಮಲ್ಲಪ್ಪಾ ಸಾಣಿಕೊಪ್ಪ,ಕುಮಾರ ದೇಸಾಯಿ ರಾಯನಗೌಡ ದ್ಯಾಮನಗೌಡ, ಗುರುರಾಜ ಹುಣಶಿಮರದ,ರತ್ನಾಕರ ನಾರಾಯಣ ರಾಯ್ಕರ, ಲಕ್ಷ್ಮಣ ಬಸಪ್ಪ ದೊಡ್ಡಮನಿ, ಸುರೇಶ ವೀರಭದ್ರಪ್ಪಾ ಕಟಗಿ.ಧಾರವಾಡ ಗ್ರಾಮೀಣ

ಅಮೃತ ಅಯ್ಯಪ್ಪ ದೇಸಾಯಿ (ಜೆಡಿಎಸ್), ಬಸವರಾಜ ಬೂದಿಹಾಳ (ಎನ್‌ಸಿಪಿ),ವಿನಯ ಕುಲಕರ್ಣಿ (ಕಾಂಗ್ರೆಸ್), ಸೀಮಾ ಮಸೂತಿ (ಬಿಜೆಪಿ), ತವನಪ್ಪ ಅಷ್ಟಗಿ (ಕೆಜೆಪಿ), ಯೋಗೇಶಗೌಡ ನಿಂಗನಗೌಡ ಗೌಡರ (ಬಿಎಸ್‌ಆರ್ ಕಾಂಗ್ರೆಸ್), ಶ್ರೀಶೈಲಗೌಡ ಕಮತರ (ಜೆಡಿಯು). ಪಕ್ಷೇತರರು: ಅಜಲ್‌ಫರೀದಾ ಗೌಸುಸಾಬ್ ರೋಣದ, ನಿಜಾಮುದ್ದೀನ್ ಅಬ್ದುಲ್‌ನಬಿ ಸೌದಾಗರ್, ಪಾಟೀಲ ಬಸವರಾಜ ನಿಂಗನಗೌಡ, ಬಸವರಾಜ ಯಲ್ಲಪ್ಪ ಪರಸಣ್ಣವರ, ಮಂಜುನಾಥ ಹನುಮಂತಪ್ಪ ಮಂಗಳಗಟ್ಟಿ, ಸೋಮಪ್ಪ ಬಸಪ್ಪ ಬೆನಕಟ್ಟಿಕುಂದಗೋಳ ಕ್ಷೇತ್ರ

ಎಂ.ಆರ್.ಪಾಟೀಲ (ಬಿಜೆಪಿ),ಬಿ.ಎಸ್.ಶಿವಳ್ಳಿ (ಕಾಂಗ್ರೆಸ್), ಎಸ್.ಐ.ಚಿಕ್ಕನಗೌಡರ (ಕೆಜೆಪಿ), ಮಲ್ಲಿಕಾರ್ಜುನ ಎಸ್.ಅಕ್ಕಿ (ಜೆಡಿಎಸ್), ವಿರೂಪಾಕ್ಷಪ್ಪ ಕಳ್ಳೀಮನಿ (ಬಿಎಸ್‌ಆರ್ ಕಾಂಗ್ರೆಸ್), ಚಂದ್ರಪ್ಪ ಕುರುಗಲ್(ಬಿಎಸ್‌ಪಿ), ಕಿರಣ್ ಸತ್ಯಪ್ಪನವರ (ಕರ್ನಾಟಕ ಮಕ್ಕಳ ಪಕ್ಷ), ಕುತ್ಬುದ್ದೀನ್ ಬೆಳಗಲಿ (ಎನ್‌ಸಿಪಿ). ಪಕ್ಷೇತರರು: ಗೋಕಾಕ್ ಮಾಬೂಸಾಬ್, ಚೆನ್ನಪ್ಪ ಕಮರೊಳ್ಳಿ, ವಿರೂಪಾಕ್ಷಗೌಡ ನಾಗನಗೌಡರನವಲಗುಂದ ಕ್ಷೇತ್ರ

ಗಡ್ಡಿ ಕಲ್ಲಪ್ಪ ನಾಗಪ್ಪ (ಕಾಂಗ್ರೆಸ್), ಎನ್.ಎಚ್.ಕೋನರಡ್ಡಿ (ಜೆಡಿಎಸ್), ಶಂಕರ ಪಾಟೀಲ ಮುನೇನಕೊಪ್ಪ (ಬಿಜೆಪಿ)

ಸೈದಾಪುರ ಯಲ್ಲಪ್ಪ ದುಂದೂರ (ಬಿಎಸ್‌ಪಿ), ಡಾ.ಶಿರಿಯಣ್ಣವರ (ಕೆಜೆಪಿ), ಶಂಭುಲಿಂಗ ಸಿದ್ರಾಮಶೆಟ್ಟರ (ಬಿಎಸ್‌ಆರ್ ಕಾಂಗ್ರೆಸ್ ಪಕ್ಷ), ಗುರುಶಾಂತಪ್ಪ ಹನುಮಪ್ಪ ಚಲವಾದಿ, ಚಂದ್ರಶೇಖರ ದೇಮಪ್ಪ ಬಗಟಿ, ಮೇಟಿಗೌಡ್ರ ಪ್ರಕಾಶ ಗೌಡ್ರ ಮಲ್ಲನಗೌಡ್ರ, ಡಾ.ಮೊಹಮ್ಮದ್ ಹುಸೇನ್ ಮೊಹಮ್ಮದ್‌ಗೌಸ್, ಬಸವಣ್ಣೆಪ್ಪ ಯಲ್ಲಪ್ಪ ಕಾದ್ರೊಳ್ಳಿ, ಆರ್.ಡಿ.ರಂಗಸ್ವಾಮಿ, ವಿನಯಕುಮಾರ ಪ. ಮ್ಯಾಗೇರಿವಿರೂಪಾಕ್ಷಗೌಡ ಶಿವನಗೌಡ ಕುಲಕರ್ಣಿ, ಶಿವಾನಂದ ಬಸಪ್ಪ ಕರಿಗಾರ, ಸುಭಾಷಚಂದ್ರ ಭೀಮನಗೌಡ ಪಾಟೀಲ.ಕಲಘಟಗಿ

ಈರಪ್ಪ ಚೆನ್ನಪ್ಪ ಸಲಗಾರ (ಬಿಜೆಪಿ), ಶೋಭಾ ವಿ.ಬಳ್ಳಾರಿ (ಬಿಎಸ್‌ಪಿ), ಪಿ.ಸಿದ್ದನಗೌಡರ (ಜೆಡಿಎಸ್),ಸಂತೋಷ ಲಾಡ್ (ಕಾಂಗ್ರೆಸ್), ಸಿ.ಎಂ.ನಿಂಬಣ್ಣವರ (ಕೆಜೆಪಿ). ಪಕ್ಷೇತರರು: ಅಕ್ಕಿ ಶಿವಪ್ಪ ಯಲ್ಲಪ್ಪ, ಬಸವಪ್ರಸಾದ ಜಾಧವ್, ಹುಸೇನ್‌ಸಾಬ್ ಮೆಹಬೂಬಸಾಬ್ ತೋರಗಲ್.

ಪ್ರತಿಕ್ರಿಯಿಸಿ (+)