ಏಳು ತಿಂಗಳ ನಂತರ ಪುಸ್ತಕ ವಿತರಣೆ

7

ಏಳು ತಿಂಗಳ ನಂತರ ಪುಸ್ತಕ ವಿತರಣೆ

Published:
Updated:

 


ತೋವಿನಕೆರೆ: ಜೂನ್ ತಿಂಗಳಲ್ಲಿ ಪ್ರಾರಂಭವಾದ ಸರ್ಕಾರಿ ಶಾಲೆಯ ಮಕ್ಕಳಿಗೆ ದಾನಿಗಳ ನೆರವಿನಿಂದ ಬುಧವಾರ ಪುಸ್ತಕಗಳನ್ನು ವಿತರಿಸಲಾಯಿತು.ತೋವಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಂಗ್ಲ ಮಾಧ್ಯಮದ 6ನೇ ತರಗತಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಯಿತು. ತರಗತಿ ಪ್ರಾರಂಭವಾಗಿ ಏಳು ತಿಂಗಳು ಕಳೆದರೂ ವಿಜ್ಞಾನ, ಸಮಾಜಶಾಸ್ತ್ರ, ಗಣಿತ ಪುಸ್ತಕಗಳು ಸರಬರಾಜು ಆಗಿರಲಿಲ್ಲ.ಈ ಬಗ್ಗೆ ಎಸ್‌ಡಿಎಂಸಿ ಸದಸ್ಯರು ಎಷ್ಟೇ ಪ್ರಯತ್ನಿಸಿದರೂ ಪುಸ್ತಕಗಳನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದಾನಿಗಳ ನೆರವಿನಿಂದ ಪುಸ್ತಕಗಳ ನಕಲು ಪ್ರತಿಗಳನ್ನು ಬೈಂಡಿಂಗ್ ಮಾಡಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ಹಂಚಲಾಯಿತು.

ಸಮಾರಂಭವನ್ನು ಗ್ರಾಮ ಪಂಚಾಯಿತಿ ಹಿರಿಯ ಸದಸ್ಯರಾದ ಟಿ.ಕೆ.ರಂಗಪ್ಪ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಮರಿಯಪ್ಪ, ಮುಖಂಡರಾದ ಬಿ.ಹನುಮಂತರಾಯಪ್ಪ, ಶ್ರೀನಿವಾಸ, ವ್ಯಾನ್ ಮೂರ್ತಿ, ಬೆಂಡೊಣೆ ಲಕ್ಷ್ಮಿನರಸಿಂಹಯ್ಯ, ದೊಗ್ಗನಹಳ್ಳಿ ಬಾಬು, ಟಿಪಿಸಿ ನಾಗರಾಜು, ರಾಮಸ್ವಾಮಿ ರಘು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry