ಭಾನುವಾರ, ಜೂನ್ 20, 2021
28 °C

ಏಷ್ಯನ್‌ ಕೂಟದಲ್ಲಿ ಬಂಗಾರ ಗೆಲ್ಲುವೆ: ಸುಶೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ಈ ವರ್ಷ  ಇಂಚೋನ್‌ನಲ್ಲಿ ನಡೆಯಲಿರುವ 17ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಸ್ವರ್ಣ ಗೆಲ್ಲುವ ಗುರಿ ಹೊಂದಿದ್ದೇನೆ’ ಎಂದು ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌ ತಿಳಿಸಿದ್ದಾರೆ.ಮಂಗಳವಾರ ಇಲ್ಲಿ ನಡೆದ 2014 ಇಂಚೋನ್‌ ಏಷ್ಯನ್‌ ಕ್ರೀಡಾಕೂಟದ ರೋಡ್‌ ಶೋ ಕಾರ್ಯಕ್ರಮದಲ್ಲಿ  ಸುಶೀಲ್‌ ಹಾಗೂ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರನ್ನು  ರಾಯ ಭಾರಿಗಳನ್ನಾಗಿ ನೇಮಕ ಮಾಡ  ಲಾಯಿತು.ಸಮಾರಂಭದ ನಂತರ ಮಾತನಾಡಿದ  ಸುಶೀಲ್‌ ‘ನಾನು ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಂತಹ ಪ್ರಮುಖ ಟೂರ್ನಿಗಳಲ್ಲಿ ಪದಕ ಜಯಿಸಿದ್ದೇನೆ. ಆದರೆ ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕೆಂಬ  ಆಸೆ ಇನ್ನೂ ಕೈಗೂಡಿಲ್ಲ.  ಈ ಬಾರಿ ಪದಕ ಗೆಲ್ಲುವ ಗುರಿ ಹೊಂದಿದ್ದು, ಚಿನ್ನ ಗೆಲ್ಲಲು ಉತ್ಸುಕನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.‘ಏಷ್ಯನ್‌ ಕ್ರೀಡಾಕೂಟ ಒಳ ಗೊಂಡಂತೆ ಮುಂಬರುವ ಪ್ರಮುಖ ಟೂರ್ನಿಗಳಿಗೆ  ಸಜ್ಜಾಗುತ್ತಿದ್ದೇನೆ. ಒಲಿಂಪಿಕ್ಸ್‌ ಕ್ರೀಡೆಗಳು ದೇಶದ ಉದ್ದಗಲಕ್ಕೂ ವಿಸ್ತಾರಗೊಳ್ಳುತ್ತಿದ್ದು, ನಮ್ಮ ರಾಷ್ಟ್ರದ ಸ್ಪರ್ಧಿಗಳು  ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿರುವುದು  ಕ್ರೀಡಾ ಬೆಳವಣಿಗೆಗೆ ಪೂರಕವಾಗಿದೆ’ ಎಂದು ಅವರು ತಿಳಿಸಿದ್ದಾರೆ.ಸಮಾರಂಭದಲ್ಲಿ ಮಾತನಾಡಿದ  ದೀಪಿಕಾ ಕುಮಾರಿ ‘ಈ ಕ್ರೀಡಾಕೂಟ ದಲ್ಲಿ ಕಠಿಣ ಪೈಪೋಟಿ ಎದುರಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.  ಹೀಗಿದ್ದರೂ ಉತ್ತಮ ಪ್ರದರ್ಶನ    ತೋರಿ ಸ್ವರ್ಣ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ’ ಎಂದು ಅವರು ನುಡಿದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.