ಶುಕ್ರವಾರ, ನವೆಂಬರ್ 22, 2019
20 °C

ಏಷ್ಯನ್ ಜೂನಿಯರ್ ಬಾಕ್ಸಿಂಗ್: ಫೈನಲ್‌ಗೆ ಪ್ರಯಾಗ್

Published:
Updated:

ನವದೆಹಲಿ (ಪಿಟಿಐ): ಭಾರತದ ಪ್ರಯಾಗ್ ಚೌಹಾಣ್ ಕಜಕಸ್ತಾನದ ಶಿಮ್ಕೆಂಟ್‌ನಲ್ಲಿ ನಡೆಯುತ್ತಿರುವ `ಎಎಸ್‌ಬಿಸಿ ಏಷ್ಯನ್ ಕಾನ್‌ಫೆಡರೇಷನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್'ನ 60 ಕೆ.ಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು.ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಕಜಕಸ್ತಾನದ ಎರ್ನಿಸ್ ಊಲು ರುಸ್ಲಾನ್ ವಿರುದ್ಧ ಸುಲಭ ಜಯ ಕಂಡರು. ಇದರೊಂದಿಗೆ ಟೂರ್ನಿಯಲ್ಲಿ ತಮಗೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತ ಪಡಿಸಿಕೊಂಡರು.16ರ ಹರೆಯದ ಪ್ರಯಾಗ್ ಭಾನುವಾರ ಕಜಕಸ್ತಾನದ ಇಲ್ಯುಬಯೇವ್ ಆಜಾತ್ ವಿರುದ್ಧ ಬಂಗಾರದ ಪದಕಕ್ಕೆ ಸೆಣೆಸಲಿದ್ದಾರೆ.

ಪ್ರತಿಕ್ರಿಯಿಸಿ (+)