ಏಷ್ಯನ್ ಜೂನಿಯರ್ ವಾಲಿಬಾಲ್ : ಕ್ವಾರ್ಟರ್ ಫೈನಲ್‌ಗೆ ಭಾರತ

7

ಏಷ್ಯನ್ ಜೂನಿಯರ್ ವಾಲಿಬಾಲ್ : ಕ್ವಾರ್ಟರ್ ಫೈನಲ್‌ಗೆ ಭಾರತ

Published:
Updated:

ಉರೆಮಿಯಾ, ಇರಾನ್: ಭಾರತ ತಂಡದವರು ಇಲ್ಲಿ ನಡೆಯುತ್ತಿರುವ 16ನೇ ಏಷ್ಯನ್ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ, ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡದವರು 26-28, 13-25, 22-25ರಲ್ಲಿ ಇರಾನ್ ಎದುರು ಸೋಲು ಕಂಡರೂ ಎಂಟರ ಘಟ್ಟದಲ್ಲಿ ಆಡಲು ಅವಕಾಶ ಪಡೆದುಕೊಂಡರು.ಏಕೆಂದರೆ ಭಾರತ ಲೀಗ್ ಹಂತದಲ್ಲಿ ಉಜ್ಬೆಕಿಸ್ತಾನ, ಚೀನಾ ತೈಪಿ ಹಾಗೂ ಆಸ್ಟ್ರೇಲಿಯಾ ಎದುರು ಗೆಲುವು ಸಾಧಿಸಿತ್ತು. ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾ ಎದುರು ಪೈಪೋಟಿ ನಡೆಸಲಿದೆ.ಮಹಿಳೆಯರು ಶುಭಾರಂಭ: ಭಾರತ ಮಹಿಳಾ ತಂಡದವರು ಬ್ಯಾಂಕಾಕ್‌ನಲ್ಲಿ ಆರಂಭವಾದ16ನೇ ಏಷ್ಯನ್ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಅವರು 25-19, 25-20. 25-18ರಲ್ಲಿ ವಿಯೆಟ್ನಾಂ ಎದುರು ಗೆದ್ದರು. ಶಿಲ್ಪಾ ಹಾಗೂ ಆತಿರಾ ಉತ್ತಮ ಪ್ರದರ್ಶನ ತೋರಿದರು. ಭಾರತ ತನ್ನ ಮುಂದಿನ ಪಂದ್ಯವನ್ನು ಮಾಂಗೋಲಿಯಾ ಎದುರು ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry