ಏಷ್ಯನ್ ಪುರಸ್ಕಾರಕ್ಕೆ ಆಯ್ಕೆ

7

ಏಷ್ಯನ್ ಪುರಸ್ಕಾರಕ್ಕೆ ಆಯ್ಕೆ

Published:
Updated:

 ನವದೆಹಲಿ (ಪಿಟಿಐ): ಏಷ್ಯಾದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ‘ಮ್ಯಾನ್ ಏಷ್ಯನ್ ಪುರಸ್ಕಾರ’ಕ್ಕೆ ಇಬ್ಬರು ಭಾರತೀಯ ಲೇಖಕರ ಕೃತಿಗಳು ಅಂತಿಮ ಹಂತದ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಆಯ್ಕೆಪಟ್ಟಿಯಲ್ಲಿರುವ ಐದು ಕೃತಿಗಳಲ್ಲಿ ಪತ್ರಕರ್ತ-ಲೇಖಕ ಮನು ಜೋಸೆಫ್ ಅವರ ‘ಸೀರಿಯಸ್ ಮೆನ್’ ಮತ್ತು ಕವಿ- ಕಾದಂಬರಿಕಾರ ತಬಿಶ್ ಖೈರ್ ಅವರ ‘ದಿ ಥಿಂಗ್ ಅಬೌಟ್ ಥಗ್ಸ್’ ಕೃತಿಗಳೂ ಸೇರಿವೆ.

ಚೀನಾದ ಬಿ ಫೀಯು ಅವರ ‘ಥ್ರೀ ಸಿಸ್ಟರ್ಸ್‌’, ನೊಬೆಲ್ ಪುರಸ್ಕೃತ ಜಪಾನಿ ಲೇಖಕ ಕೆನ್‌ಜಬುರೊ ಅವರ ‘ದಿ ಚಾಲೆಂಜಿಂಗ್ ಹಾಗೂ ಜಪಾನಿನ ಮತ್ತೊಬ್ಬ ಲೇಖಕ ಯೊಕೊ ಒಗವ ಅವರ ‘ಹೋಟೆಲ್ ಐರಿಸ್’ ಪಟ್ಟಿಯಲ್ಲಿರುವ ಇತರ ಕೃತಿಗಳು.

2010ರ ಪುರಸ್ಕಾರಕ್ಕಾಗಿ ಒಟ್ಟು 54 ಕೃತಿಗಳು ಬಂದಿದ್ದವು.

 ಹಾಂಕಾಂಗ್‌ನಲ್ಲಿ ಮುಂದಿನ ತಿಂಗಳ  17ರಂದು ನಡೆಯು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ  ಮಾಡಲಾಗುತ್ತದೆ. ಇದು 30,000 ಡಾಲರ್ ನಗದು ಬಹುಮಾನವನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry