ಸೋಮವಾರ, ಡಿಸೆಂಬರ್ 16, 2019
17 °C

ಏಷ್ಯನ್ ಬಿಲ್ಡರ್ಸ್‌ಗೆ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಂಡಿಯನ್ ಅಚೀವರ್ಸ್‌ ಫಾರಂ ನೀಡುವ ಪ್ರತಿಷ್ಠಿತ  `ಬೆಸ್ಟ್ ಬ್ಯುಸಿನೆಸ್ ಪ್ರಾಕ್ಟೀಸ್' ಪ್ರಶಸ್ತಿಗೆ ಗುಲ್ಬರ್ಗದ `ಏಷ್ಯನ್ ಬಿಲ್ಡರ್ಸ್‌' ಭಾಜನರಾಗಿದ್ದಾರೆ.ನವದೆಹಲಿಯಲ್ಲಿ ಈಚೆಗೆ ನಡೆದ `ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ' (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಬಗ್ಗೆ ವಿಚಾರಸಂಕಿರಣದಲ್ಲಿ ರಿಯಲ್ ಎಸ್ಟೇಟ್ ರಂಗದಲ್ಲಿನ ಸಾಧಕರಿಗೆ ನೀಡುವ ಈ ಪ್ರಶಸ್ತಿಯನ್ನು ಏಷ್ಯನ್ ಬಿಲ್ಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕ  ಮಹಮ್ಮದ್ ರಫಿಯುದ್ದೀನ್ ಅವರಿಗೆ ಪ್ರದಾನ ಮಾಡಲಾಯಿತು.ಅಲ್ಪಸಂಖ್ಯಾತರ ಶಿಕ್ಷಣ ಕುರಿತ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ಎಸ್.ಎ. ಸಿದ್ದಿಕಿ,  ಸಾಮಾಜಿಕ ಹೋರಾಟಗಾರ್ತಿ ಡಾ. ಕಿರಣ್ ಬೇಡಿ,  ಸಿಬಿಐ ಮಾಜಿ ನಿರ್ದೇಶಕ ಡಾ. ಜೋಗೀಂದರ್ ಸಿಂಗ್ ಮುಂತಾದ ಗಣ್ಯರ ಇದ್ದರು.ಹಲವು ಪ್ರಥಮಗಳ ಹೆಗ್ಗಳಿಕೆ ಹೊಂದಿರುವ ಏಷ್ಯನ್ ಬಿಲ್ಡರ್ಸ್‌ ಗುಲ್ಬರ್ಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಗೆ ಪ್ರಯತ್ನಿಸಿದ್ದಲ್ಲದೆ, ವಸತಿ ಹಾಗೂ ವಾಣಿಜ್ಯಿಕ ನಿರ್ಮಾಣ ರಂಗದಲ್ಲೂ ವಿಶಿಷ್ಟ ಹೆಜ್ಜೆಗುರುತುಗಳನ್ನು ಹೊಂದಿದ್ದು, ಕಟ್ಟಡ- ಸಂಕೀರ್ಣಗಳ ವಿನ್ಯಾಸ, ಒಳಾಂಗಣ ಇತ್ಯಾದಿಗಳಿಗಾಗಿ ಹೆಸರುವಾಸಿಯಾಗಿದ್ದಾರೆ.  ಗುಲ್ಬರ್ಗದ ಹೃದಯ ಭಾಗದ ಕೋಟೆರಸ್ತೆಯ ಎರಡು ಎಕರೆ  ಪ್ರದೇಶದಲ್ಲಿ `ಪ್ರಕಾಶ್ ಏಷ್ಯನ್ ಮಾಲ್' ಎಂಬ ವಿಭಿನ್ನ ಯೋಜನೆಯ ನಿರ್ಮಾಣ ಪ್ರಾರಂಭಿಸಲಾಗಿದ್ದು,  ಇದು ನಗರದ ಅತಿದೊಡ್ಡ ವಾಣಿಜ್ಯಿಕ ಸಂಕೀರ್ಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)